ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗ ಸಂಪೂರ್ಣ ಬಂದ್, ಕಡಬದಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ, ಎಲ್ಲಾ ತಾಲೂಕು ಕೇಂದ್ರದಲ್ಲಿ ಭುಗಿಲೆದ್ದ ಆಕ್ರೋಶ ವ್ಯಕ್ತವಾಗಿದೆ.
ಬೆಳಗ್ಗಿನಿಂದ ತೆರೆದೇ ಇದ್ದ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಪೇಟೆ ಬಂದ್ ಹಿನ್ನೆಲೆಯಲ್ಲಿ 10 ಗಂಟೆ ಸುಮಾರಿಗೆ ಬಂದ್'ನತ್ತ ತೆರಳುತ್ತಿದೆ.
ವಾಹನ ಸಂಚಾರ ಕ್ರಮೇಣ ವಿರಳ ಆಗುತ್ತಿವೆ. ತೆರೆದಿದ್ದ ಅಂಗಡಿ ಮುಂಗಟ್ಟುಗಳು ಬಂದ್ ಆಗುತ್ತಿವೆ. ಶಾಲಾ – ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಮನೆ ಕಡೆ ಹಿಂದಿರುಗುತ್ತಿದ್ದಾರೆ. ಪೇಟೆಗೆ ಆಗಮಿಸಿದ್ದ ಸಾರ್ವಜನಿಕರು ಹಿಂದಡಿ ಇಡುತ್ತಿದ್ದಾರೆ.
ಪುತ್ತೂರು ಪೇಟೆ ಬಂದ್'ನತ್ತ ವಾಲುತ್ತಿದೆ. ಹೆಚ್ಚು ಕಡಿಮೆ ಸ್ವಯಂಪ್ರೇರಿತರಾಗಿ ಅಂಗಡಿಗಳು ಬಂದ್ ಆಗುತ್ತಿವೆ.
ಬಂಟ್ವಾಳ ನಗರ ಭಾಗ ಬಂದ್ ಆಗಿದೆ.ತಾ ಲೋಕಿನಲ್ಲಿ ಬಹುತೇಕ ಬಸ್ ಸಂಚಾರ ಸ್ಥಗಿತವಾಗಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರ ಜಮಾವಣೆ, ವ್ಯಾಪಕ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.
ಕಡಬ ಪೇಟೆಯಲ್ಲಿ ಹಿಂದೂ ಪರ ಸಂಘಟನೆಯಿಂದ ಕಡಬ -ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಬಂದ್ ನಡೆಸಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಕಡಬ ಪೇಟೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಾಗಶಃ ಅಂಗಡಿ ಮುಂಗಟ್ಟು ಬಂದ್ ಆಗಿದೆ.
ಗ್ರಾಮೀಣ ಭಾಗದಲ್ಲಿ ಕೆಲ ಹಿಂದೂ ಪರ ಸಂಘಟನೆಗಳು ತೆರೆದಿದ್ದ ಅಂಗಡಿಗಳಿಗೆ ತೆರಳಿ, ಬಂದ್ ಮಾಡುವಂತೆ ಮನವಿ ಮಾಡುತ್ತಿರುವುದು ಕಂಡು ಬಂದಿತು