ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿಗೆ ಸಂಬಂಧಿಸಿದ ಜಾಗದಲ್ಲಿ ಮೂರು ಬೀದಿ ನಾಯಿಗಳು ಮೃತಪಟ್ಟಿದ್ದು, ಬಾಯಿಯಲ್ಲಿ ನೊರೆ ಬರುತ್ತಿದ್ದುದರಿಂದ ಕಿಡಿಗೇಡಿಗಳು ವಿಷವಿಕ್ಕಿರುವ ಶಂಕೆಯಲ್ಲಿ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು ನಾಲ್ಕು ವರ್ಷಗಳಿಂದ 6 ಬೀದಿ ನಾಯಿಗಳು ಇಲ್ಲಿನ ಪರಿಸರದಲ್ಲಿ ಓಡಾಡುಕೊಂಡಿದ್ದವು. ಅವುಗಳಿಗೆ ಸ್ಥಳೀಯರು ಆಹಾರ ನೀಡುತ್ತಿದ್ದರು. ಬುಧವಾರ ಬೆಳಗ್ಗೆ ಈ ಪೈಕಿ ಮೂರು ನಾಯಿಗಳು ಮೃತಪಟ್ಟಿವೆ. ಮೃತಪಟ್ಟ ನಾಯಿಗಳನ್ನು ಅಲೋಶಿಯಸ್ ಕಾಲೇಜಿಗೆ ಸಂಬಂಧಿಸಿದವರು ಅವರ ಜಾಗದಲ್ಲಿ ದಫನ ಮಾಡಿದ್ದಾರೆ.