ಜಿಲ್ಲೆ

ಮಂಗಳೂರು ಬಸ್‌ಗೆ ಕಲ್ಲು ತೂರಾಟ ನಾಲ್ವರ ಬಂಧನ

ಹರೀಶ ಎಂ.

ಮಂಗಳೂರು: ದ.ಕ. ಜಿಲ್ಲಾ ಬಂದ್ ವೇಳೆ ನಗರದ ಪಂಪ್‌ವೆಲ್ ಬಳಿ ಮೊದಲಾದ ಕಡೆ ಬಸ್‌ಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ನಾಲ್ವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಬಾಬುಗುಡ್ಡ ನಿವಾಸಿಗಳಾದ ಬಾಲಚಂದ್ರ (31), ಅಕ್ಷಯ್ (21), ಜಪ್ಪಿನಮೊಗರು ನಿವಾಸಿ ಶಬೀನ್ ಪಡಿಕ್ಕಲ್ (38), ಮಂಜನಾಡಿ ನಿವಾಸಿ ರಾಕೇಶ್ ಎಂ.(26) ಪ್ರಕರಣದ ಆರೋಪಿಗಳು.

ಪ್ರಕರಣ ವಿವರ: ಮೇ 2ರಂದು ಬೆಳಗ್ಗೆ 6.50 ರಿಂದ ಬೆಳಿಗ್ಗೆ 7 ರ ನಡುವೆ ಪಂಪ್‌ವೆಲ್ ಬಳಿ 5 ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲುಗಳಿಂದ ದಾಳಿ ನಡೆಸಲಾಗಿದೆ. ಮುಂಭಾಗದ ವಿಂಡ್‌ಶೀಲ್ಡ್‌ಗಳಿಗೆ ಕಲ್ಲು ಎಸೆದು ಹಾನಿ ಮಾಡಲಾಗಿದೆ. ಬಸ್‌ನ ಚಾಲಕ ಸತೀಶ್ ನಾಯಕ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಲಾದ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.