ಜಿಲ್ಲೆ

ನಾಳೆ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರಥಮ ವರ್ಧಂತ್ಯೋತ್ಸವ

ಹರೀಶ ಎಂ.

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ವಳಚ್ಚಿಲ್ ಕ್ಯಾಂಪಸ್‌ನಲ್ಲಿರುವ ಶ್ರೀನಿವಾಸ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ದೇವರ ಪ್ರಥಮ ವರ್ಧಂತ್ಯೋತ್ಸವ ಫೆ.10ರಂದು ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಬೆಳಗ್ಗೆ 7ಗಂಟೆಗೆ ಭಜನೆಯಿಂದ ಪ್ರಾರಂಭವಾಗಿ 9 ಗಂಟೆಗೆ ಪುಣ್ಯಾಹವಾಚನ, ಗಣಹೋಮ, ವಿಷ್ಣು ಸಹಸ್ರನಾಮ ಹೋಮ ಮತ್ತು ಪವಮಾನ ಹೋಮ ನಡೆಯಲಿದೆ. ನಂತರ 10ರಿಂದ 13ರವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, 12 ಗಂಟೆಗೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನೆರವೇರಲಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟ್ರಾರ್ ಡಾ.ಶ್ರೀನಿವಾಸ ಮಯ್ಯ ಡಿ. ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಪರಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಭಜನೆ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 5.30ರಿಂದ 7.30ರವರೆಗೆ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ. ಪೂಜಾ ಕಾರ್ಯದಲ್ಲಿ ಶ್ರೀನಿವಾಸ ವಿವಿಯ ಕುಲಾಧಿಪತಿ ಡಾ.ಸಿಎ ಎ.ರಾಘವೇಂದ್ರ ರಾವ್, ಉಪಕುಲಾಧಿಪತಿ ಡಾ.ಎ.ಶ್ರೀನಿವಾಸ ರಾವ್, ಟ್ರಸ್ಟಿಗಳಾದ ಎ.ವಿಜಯಲಕ್ಷ್ಮೀ, ಮಿತ್ರಾ ಎಸ್.ಪಾವ್ ಭಾಗವಹಿಸುವರು ಎಂದವರು ತಿಳಿಸಿದರು.

ಶ್ರೀನಿವಾಸ ವಿವಿಯ ರಿಜಿಸ್ಟ್ರಾರ್ ಡಾ.ಅನಿಲ್ ಕುಮಾರ್, ಅಭಿವೃದ್ಧಿ ರಿಜಿಸ್ಟ್ರಾರ್ ಡಾ.ಅಜಯ್ ಕುಮಾರ್, ರಾಮಕೃಷ್ಣ ಶಬರಾಯ ಉಪಸ್ಥಿತರಿದ್ದರು.