ಜಿಲ್ಲೆ

ಸೋಮೇಶ್ವರ ಮೈಸೂರಿನ ಮೂವರು ಯುವತಿಯರು ಈಜು ಕೊಳದಲ್ಲಿ ಮುಳುಗಿ ಮೃತ್ಯು

ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಎಂಬಲ್ಲಿ ಇರುವ ವಾಸ್ಕೊಸ್ ರೆಸಾರ್ಟ್‌ನಲ್ಲಿ ಮೈಸೂರು ಮೂಲದ ಮೂವರು ಯುವತಿಯರು ರೆಸಾರ್ಟ್ ಮುಂದುಗಡೆಯ ಸ್ವೀಮಿಂಗ್ ಪೂಲ್‌ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೈಸೂರು ವಿಜಯನಗರದ ಕೀರ್ತನಾ ಎನ್. (21), ಕುರುಬರ ಹಳ್ಳಿ ನಿಶಿತಾ ಎಂ.ಡಿ. (21), ರಾಮಾನುಜ ರಸ್ತೆ ಕೆ.ಆರ್. ಮೊಹಲ್ಲಾ ನಿವಾಸಿ ಪಾರ್ವತಿ (20) ಮೃತಪಟ್ಟವರು.

ಯುವತಿಯರು ಶನಿವಾರ ಈ ರೆಸಾರ್ಟ್‌ಗೆ ಆಗಮಿಸಿ ಉಳಿದುಕೊಂಡಿದ್ದರು. ಮೊಬೈಲ್ ಫೋನ್ ರೆಕಾರ್ಡ್‌ನಲ್ಲಿಟ್ಟು ನೀರಿಗೆ ಇಳಿದಿದ್ದರು. ಈಜು ಬಾರದ ಕಾರಣ ಮೂವರು ಮುಳುಗಿ ಮೃತಪಟ್ಟಿದ್ದಾರೆ. ಈ ರೆಸಾರ್ಟ್ ಸ್ಥಳೀಯ ಮನೋಹರ್ ಎಂಬವರಿಗೆ ಸೇರಿದ್ದಾಗಿರುತ್ತದೆ.