ಜಿಲ್ಲೆ

ಮೆರವಣಿಗೆ, ಪ್ರತಿಭಟನೆ ವೇಳೆ ಡ್ರೋನ್ ಕಣ್ಗಾವಲು

ಮಂಗಳೂರು: ನಗರ ಪೊಲೀಸ್ ಕಮಿಶನರೆಟ್ ವ್ಯಾಪ್ತಿಯಲ್ಲಿ ನಡೆಯುವ ಬೃಹತ್ ಮೆರವಣಿಗೆ, ಪ್ರತಿಭಟನೆ ಹಾಗೂ ಸಂಚಾರ ಸುವ್ಯವಸ್ಥೆ ಸಂದರ್ಭ ಅತ್ಯಾಧುನಿಕ ಡ್ರೋನ್ ಕ್ಯಾಮರಾ ಕಣ್ಗಾವಲು ಇರಿಸಲಿದೆ.


ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ನೀಡಲಾದ ಅತ್ಯಾಧುನಿಕ ಡ್ರೋನ್ ಕ್ಯಾಮರಾವನ್ನು ಜನರಲ್ ಮ್ಯಾನೇಜರ್ ಅರುಣ್‌ಪ್ರಭ ಅವರು ಮಂಗಳವಾರ ಪೊಲೀಸ್ ಆಯುಕ್ತ ಅನುಮಪ್ ಅಗರ್‌ವಾಲ್ ಅವರಿಗೆ ಹಸ್ತಾಂತರಿಸಿದರು.


ಇದಕ್ಕಾಗಿ 7 ಮಂದಿ ಪೊಲೀಸರಿಗೆ ಡ್ರೋನ್ ಹಾರಾಟ, ನಿರ್ವಹಣೆಗೆ ಸಂಬಂಧಿಸಿ ತರಬೇತಿ ನೀಡಲಾಗಿದೆ. ನಗರದ ಜನತೆಯ ಸುರಕ್ಷತೆ ಹಾಗೂ ಭದ್ರತೆಗೆ ಉದ್ದೇಶದಿಂದ ಡ್ರೋನ್ ಕಾರ್ಯಾಚರಿಸಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.


ಜನದಟ್ಟಣೆ ನಡುವೆ ಯಾವುದಾದರೂ ಅಹಿತಕರ ಘಟನೆ ನಡೆದರೆ ಆರೋಪಿಗಳ ತಕ್ಷಣ ಪತ್ತೆಗೆ ಈ ಡ್ರೋನ್ ಕ್ಯಾಮರಾ ಸಹಕಾರಿಯಾಗಲಿದೆ.