ಜಿಲ್ಲೆ

ಕದ್ರಿ ಶಿವಳ್ಳಿ ಸ್ಪಂದನ ವಾರ್ಷಿಕೋತ್ಸವ ಸಾಧಕರಿಗೆ ಶಿವಳ್ಳಿರತ್ನ ಪ್ರಶಸ್ತಿ ಪ್ರದಾನ

ಮಂಗಳೂರು: ಕದ್ರಿ ಮಾತಾಕೃಪಾದಲ್ಲಿ ನಡೆದ ಶಿವಳ್ಳಿ ಸ್ಪಂದನ ವಾರ್ಷಿಕೋತ್ಸವ ಸಂದರ್ಭ ಏಳು ಸಾಧಕರಿಗೆ ಶಿವಳ್ಳಿ ರತ್ನ ಪ್ರದಾನ ಮಾಡಲಾಯಿತು.


ವಿದ್ವಾನ್ ವೇದವ್ಯಾಸ ತಂತ್ರಿಯವರಿಗೆ ಶಿವಳ್ಳಿ ತಂತ್ರಾಗಮ ರತ್ನ, ಅರುಣ್ ವಿ. ರಾವ್ ಅವರಿಗೆ ಶಿವಳ್ಳಿ ಕ್ರೀಡಾರತ್ನ, ಭಾಸ್ಕರ ರಾವ್ ಬಾಳ ಅವರಿಗೆ ಉದ್ಯೋಗರತ್ನ, ಸುಬ್ರಹ್ಮಣ್ಯ ರಾವ್ ಶರವು ಅವರಿಗೆ ಶಿವಳ್ಳಿ ಕಲಾರತ್ನ, ಸಸಿಹಿತ್ಲು ಸುಬ್ರಹ್ಮಣ್ಯ ಭಟ್ ಅವರಿಗೆ ಶಿವಳ್ಳಿ ಪಾಕಶಾಸ್ತ್ರರತ್ನ ಬಿರುದಿನಿಂದ ಸನ್ಮಾನಿಸಲಾಯಿತು.


ಡಾ. ಸುರೇಶ ರಾವ್ ಅವರಿಗೆ ಶಿವಳ್ಳಿ ಸಮಾಜ ರತ್ನ, ಡಾ ಸಿಎ.ಎ. ರಾಘವೇಂದ್ರ ರಾವ್ ಅವರಿಗೆ ಶಿವಳ್ಳಿ ಶಿಕ್ಷಣರತ್ನ ಪ್ರಶಸ್ತಿಯನ್ನು ಅವರ ಸ್ವಗೃಹಕ್ಕೆ ತೆರಳಿ ಸನ್ಮಾನಿಸಲಾಯಿತು.


ಆಡಳಿತ ಮಂಡಳಿಯ ಕೃಷ್ಣ ಭಟ್ ಕೆ., ಕಾರ್ಯದರ್ಶಿ ಬಿ.ಉದಯ ಶಂಕರ ಭಟ್, ರವೀಶ್ ನಾರ್ಶ, ಪ್ರದೀಪ್ ಕುಮಾರ್ ರಾವ್,ಸುಮನಾ ಪಿ ರಾವ್, ಕೆ.ಸುಬ್ರಹ್ಮಣ್ಯ ರಾವ್, ಅನಂತ ಪದ್ಮನಾಭ ವೈಲಾಯ, ,ಗಣೇಶ್ ಭಟ್ ಕೋಲ್ನಾಡು, ಮಹಿಳಾ ಘಟಕದ ಅಧ್ಯಕ್ಷೆ ರಮಾಮಣಿ ಭಟ್ ಉಪಸ್ಥಿತರಿದ್ದರು.
ಜೀ ಕನ್ನಡ ಪ್ರಶಸ್ತಿ ವಿಜೇತೆ ರಿಷಿಕಾ ಕುಂದೇಶ್ವರ ಅವರನ್ನು ಗೌರವಿಸಲಾಯಿತು. ಚಂದ್ರಿಕಾ ಸುರೇಶ್ ನಿರೂಪಿಸಿದರು. ಉಪಾಧ್ಯಕ್ಷ ಕೆ. ವಾಸದೇವ ಭಟ್ ವಂದಿಸಿದರು.