ಜಿಲ್ಲೆ

ಶಾರದ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾರದಾ ಸ್ಕಾಲರ್‌ಶಿಪ್ ಪರೀಕ್ಷೆ

ಮಂಗಳೂರು: ಭಾರತದ ಉಜ್ವಲ ಭವಿಷ್ಯಕ್ಕೆ ಕೊಡುಗೆ ನೀಡುವ ಪ್ರಯತ್ನದಲ್ಲಿ ಮಂಗಳೂರು ಶಾರದ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯು ಮುಂದಿನ ತಲೆಮಾರಿನ ಬುದ್ದಿವಂತ ಮನಸ್ಸುಗಳನ್ನು ಪೋಷಿಸುವ ಕಾಯಕಲ್ಪವನ್ನು ಆರಂಭಿಸಿದೆ.

ಇದರ ಅಂಗವಾಗಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರವೀಣ ಎನ್ನುವ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಯೋಜನೆಯಂತೆ ಅರ್ಹತಾ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 10 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ವಿದ್ಯಾಭ್ಯಾಸ ಹಾಗೂ ಉಳಿದ ಹತ್ತು ಮಕ್ಕಳಿಗೆ ಶೇ.50 ಮತ್ತು ಇನ್ನುಳಿದ 10 ಮಕ್ಕಳಿಗೆ ಶೇ. 25 ಶುಲ್ಕ ಕಡಿತ ಮಾಡಿ ವಿದ್ಯಾಭ್ಯಾಸವನ್ನು ಒದಗಿಸುವ ಮಹತ್ವಕಾಂಕ್ಷೆಯನ್ನು ಹೊಂದಿದೆ. ಅಂತೆಯೇ ಇದುವರೆಗೆ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದು, ಇದು ಸಾವಿರಾರು ಪ್ರತಿಭಾವಂತ ಮಕ್ಕಳಿಗೆ ಒಂದು ಆಶಾಕಿರಣದ ಯೋಜನೆಯಾಗಿದೆ.

ಫೆ.9ರಂದು ಆನ್‌ಲೈನ್ ಮೋಡ್ ನಲ್ಲಿ ಈ ಪ್ರತಿಭಾ ಪ್ರವೀಣ ಪರೀಕ್ಷೆಯು ನಡೆಯಲಿದೆ. ಆಸಕ್ತ 10ನೇ ತರಗತಿಯ ವಿದ್ಯಾರ್ಥಿಗಳು ಈ ಲಿಂಕ್‌ನಲ್ಲಿ ಉಚಿತವಾಗಿ ನೋಂದಾಯಿಸಬಹುದು- https://sharadavidyanikethanapuc.com

ಶೇಕಡಾ ನೂರರ ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಉಚಿತವಾಗಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 7022437688, 9019730478 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.