ಜಿಲ್ಲೆ

ವೈದ್ಯರಿಗೆ ಕಾನೂನಿನ ಜ್ಞಾನ ಅವಶ್ಯಎಸ್.ಡಿ.ಎಂ. ಕಲ್ಪಿತ ನ್ಯಾಯಾಲಯ ಉದ್ಘಾಟಿಸಿ ಡಾ.ಉನ್ನಿ ಕೃಷ್ಣನ್ ಅಭಿಮತ

ಹರೀಶ ಎಂ.

ಮಂಗಳೂರು: ವೈದ್ಯರಿಗೆ ತಮ್ಮ ವೃತ್ತಿ ಜೀವನದಲ್ಲಿ ಕಾನೂನಿನ ಜ್ಞಾನ ಅತೀ ಅಗತ್ಯ ಎಂದು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ.ಉನ್ನಿಕೃಷ್ಣನ್ ಹೇಳಿದರು.


ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಕೆ.ಎಂ.ಸಿ. ಸಹಯೋಗದೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ನಡೆದ ಕಲ್ಪಿತ ನ್ಯಾಯಲಯ ಪ್ರದರ್ಶನವನ್ನು ಉದ್ಘಾಟಿಸಿಮಾತನಾಡಿದ ಅವರು, ವ್ಯೆದ್ಯರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದೇ ರೀತಿ ವಕೀಲರು ಕೂಡಾ ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ವೈದ್ಯಕೀಯ ಪ್ರಕರಣಗಳನ್ನು ಎದುರಿಸಬೇಕಾಗಿರುತ್ತದೆ. ಆದ್ದರಿಂದ ವೈದ್ಯರಿಗೆ ಕಾನೂನಿನ ಜ್ಞಾನ ಹಾಗೂ ವಕೀಲರಿಗೆ ವೈದ್ಯಕೀಯ ಜ್ಞಾನ ಬಹಳ ಅವಶ್ಯ. ಈ ನಿಟ್ಟಿನಲ್ಲಿ ಎಸ್.ಡಿ.ಎಂ ಕಾನೂನು ಕಾಲೇಜು ಹಾಗೂ ಕೆ.ಎಂ.ಸಿ. ನಡುವಿನ ಒಡಂಬಡಿಕೆ ಅರ್ಥ ಪೂರ್ಣವಾಗಿದ್ದು ಇದರ ಅಡಿಯಲ್ಲಿ ಜಂಟಿ ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳಲಿ ಎಂದು ಆಶಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಸಭಾಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಸಿ. ಯ ಡಾ.ಸುರೇಶ್ ಶೆಟ್ಟಿ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಡಾ.ಕಿರಣ್ ಹೆಗ್ಡೆ ಉಪಸ್ಥಿತರಿದ್ದರು.


ಕಾರ‌್ಯಕ್ರಮ ಸಂಯೋಜಕಿ ಡಾ.ಅನ್ನಪೂರ್ಣ ಶೇಟ್ ಸ್ವಾಗತಿಸಿ, ಸುಮಾ ಕೋಗಿಲ್‌ಗೇರಿ ವಂದಿಸಿದರು. ಡೇಲ್ ನಿರೂಪಿಸಿದರು. ಮಂಗಳೂರು ಹಾಗೂ ಉಡುಪಿಯ ಹಲವಾರು ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದರು. ವಕೀಲರಾದ ವರದರಾಜ್, ರಾಘವೇಂದ್ರ ರಾವ್, ನವೀನ್ ಬಣ್ಣಿಂತಾಯ, ವೈದ್ಯರಾದ ಡಾ.ವಿಕ್ರಂ ಶೆಟ್ಟಿ, ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಡಾ.ಜಯಮೋಳ್ ನ್ಯಾಯಾಧೀಶರಾಗಿ ಸಹಕರಿಸಿದರು. ಅಪರಾಹ್ನ ನಡೆದ ಸಮಾರೋಪ ಕಾರ‌್ಯಕ್ರಮದಲ್ಲಿ ಕಾಲೇಜಿನ ವತಿಯಿಂದ ನ್ಯಾಯಾಧೀಶರುಗಳನ್ನು ಗೌರವಿಸಲಾಯಿತು. ಡಾ. ರವೀಂದ್ರ ರಜಪೂತ್ ಸನ್ಮಾನ ಕಾರ‌್ಯಕ್ರಮವನ್ನು ನಿರ್ವಹಿಸಿದರು.