ಮಂಗಳೂರು: ಸಮಾಜದಲ್ಲಿರುವ ಅಸಹಾಯಕರಿಗೆ ನೆರವಾಗಲು ಆರ್ಥಿಕ ಸದೃಢತೆಯ ಅಗತ್ಯವಿಲ್ಲ. ಕೇವಲ ಸೇವಾ ಮನೋಭಾವವೊಂದು ಗಟ್ಟಿಯಾಗಿದ್ದರೆ ಸಾಕು. ಅದು ಜೀವನವನ್ನು ಅರ್ಥಪೂರ್ಣವನ್ನಾಗಿಸುತ್ತದೆ ಎಂದು ಸರ್ಕಾರಿ ಶಿಕ್ಷಕ ಶಿಕ್ಷಣ ಮಾಹಾವಿದ್ಯಾಲಯದ ಉಪನ್ಯಾಸಕ ಡಾ.ಶಿವಪ್ರಕಾಶ್ ಹೇಳಿದರು.
ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಎನ್.ಎಸ್.ಎಸ್ ಮತ್ತು ವೈ.ಆರ್.ಸಿ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಎಸ್.ಎಸ್ ಮತ್ತು ವೈ.ಆರ್ .ಸಿ ,ಯು ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ತುಂಬುತ್ತದೆ. ತನ್ನಂತೆ ತನ್ನ ಸಹಜೀವಿಗಳನ್ನು ಕಾಣುವ ಮತ್ತು ನೆರವಾಗುವ ಪಾಠವನ್ನು ಕಲಿಸಿಕೊಡುತ್ತದೆ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಮಾತನಾಡಿ, ಎನ್.ಎಸ್.ಎಸ್ ಚಟುವಟಿಕೆಗಳು ಕಾಲೇಜನ್ನು ಕ್ರಿಯಾಶೀಲವಾಗಿಸುತ್ತವೆ. ಅವು ಎಂದಿಗೂ ಉಳಿಯುವ ನೆನಪುಗಳಾಗಿ ವಿದ್ಯಾರ್ಥಿಗಳನ್ನು ಕಾಡುತ್ತಲೇ ಮುನ್ನಡೆಸುತ್ತಿರುತ್ತವೆ ಎಂದರು.
ಎಸ್.ಸಿ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಯು.ಕೆ. ಖಾಲಿದ್ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಎನ್.ಎಸ್.ಎಸ್ ಸಹ ಸಂಯೋಜಕಿ ಧನಶ್ರೀ, ಹಿರಿಯ ಉಪನ್ಯಾಸಕರಾದ ಪ್ರೊ.ಮಾದವ್ ಮತ್ತು ಪ್ರೊ.ಗಾಯತ್ರಿ, ಎನ್.ಎಸ್.ಎಸ್., ವೈ ಆರ್ ಸಿ ವಿದ್ಯಾರ್ಥಿ ನಾಯಕರಾದ ಸುಹಾನ್, ಗೌತಮಿ, ಮನೀಷ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಾದ ಶ್ರದ್ಧಾ, ನೀಲಮ್ಮಾ, ಮಾಷ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಕಾರ್ತಿಕ್ ಸ್ವಾಗತಿಸಿ, ವೈ.ಆರ್. ಸಿ ಸಂಯೋಜಕ ಚರಣ್ ರಾಜ್ ವಂದಿಸಿದರು.