ಮಂಗಳೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥೆ ಮತ್ತು ಶಾರದ ಸಮೂಹ ಸಂಸ್ಥೆಗಳು ದೇವಿನಗರ ತಲಪಾಡಿ ಇವರ ಜಂಟಿ ಆಶ್ರಯದಲ್ಲಿ ರಾಜ್ಯ ಹಾಗೂ ಕ್ಷೇತ್ರಿಯ ಮಟ್ಟದ ಗಣಿತ ಹಾಗೂ ಜ್ಞಾನ ವಿಜ್ಞಾನ ಮೇಳ ಇತ್ತೀಚೆಗೆ ನಡೆಯಿತು.
ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ಲಿಖಿತ ಎಂ.ಎಸ್ ಗಣಿತ ಪತ್ರ ವಾಚನದಲ್ಲಿ ಪ್ರಥಮ, ಪ್ರಥಮ ಪಿಯುಸಿ ಅನ್ವಿತಾ ಪಿ ಗಣಿತ ಮೂರು ಆಯಾಮ ಹಾಗೂ ಶಂಕುವಿನ ಆಕಾರದ ಮೋಡಲ್ ನಲ್ಲಿ ಪ್ರಥಮ, ದ್ವಿತೀಯ ಪಿಯುಸಿ ಹರಿಪ್ರಸಾದ್ ಜಿ ರಸಾಯನಶಾಸ್ತ್ರ ವಿಜ್ಞಾನ ಪ್ರಯೋಗದಲ್ಲಿ ಪ್ರಥಮ, ಪ್ರಥಮ ಪಿಯುಸಿ ಹರ್ಷ ಜಿ.ಎಸ್ ಗಣಿತ ಪ್ರಯೋಗದಲ್ಲಿ ಪ್ರಥಮ, ದ್ವಿತೀಯ ಪಿಯುಸಿ ವಿಜ್ಞಾನ ಜೀವಶಾಸ್ತ್ರ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಖಿಲ ಭಾರತೀಯ ವಿಜ್ಞಾನ ಮೇಳ ನ.13 ರಿಂದ 16ರ ತನಕ ಜಯಪುರ ರಾಜಸ್ಥಾನದಲ್ಲಿ ಹಾಗೂ ಅಖಿಲ ಭಾರತೀಯ ಗಣಿತ ಮೇಳ ನ. 19 ರಿಂದ 22 ರವರೆಗೆ ಒಡಿಸ್ಸಾ ದ ಪುರಿಯಲ್ಲಿ ನಡೆಯಲಿದೆ.