ಜಿಲ್ಲೆ

ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ ನಾಯಕತ್ವ ಗುಣ ಬೆಳೆಸಿ ರೋಟರಾಕ್ಟ್ ಸಿಟಿ ಸಭಾಪತಿ ಡಾ. ದೇವದಾಸ್ ರೈ ಸಲಹೆ

ಹರೀಶ ಎಂ.

ಮಂಗಳೂರು : ರೋಟರ‌್ಯಾಕ್ಟ್ ಸಂಸ್ಥೆಯ ಯುವ ಸದಸ್ಯರು ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ ಸಂಸ್ಥೆಯ ಜನಪರ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನಾಯಕತ್ವ ಗುಣ ಬೆಳೆಸಿ ಯಶಸ್ಸು ಸಾಧಿಸಬೇಕು ಎಂದು ರೋಟರಾಕ್ಟ್ ಸಿಟಿ ಸಂಸ್ಥೆಯ ಸಭಾಪತಿಯವರಾದ ಡಾ. ದೇವದಾಸ್ ರೈ ಸಲಹೆ ನೀಡಿದ್ದಾರೆ.
ರೋಟರಾಕ್ಟ್ ಸಿಟಿ ಮಂಗಳೂರು ಸಿಟಿ ಸಂಸ್ಥೆಯ 2024-25 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ನೂತನ ತಂಡಕ್ಕೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಯಶಸ್ಸು ಹಾರೈಸಿದರು.
ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷರಾದ ಬ್ರೈನ್ ಪಿಂಟೋ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಪದಗ್ರಹಣದ ವಿಧಿವಿಧಾನ ನೆರವೇರಿಸಿ ತಂಡಕ್ಕೆ ಶುಭಕೋರಿದರು.
ನಿರ್ಗಮನ ಅಧ್ಯಕ್ಷ ಅವಿನಾಶ್ ಕುಲಾಲ್ ಸ್ವಾಗತಿಸಿ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಸರ್ವಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ರೋ. ಬಿದ್ದಪ್ಪ ಎಂ.ಎ. ರವರು ಪ್ರಸ್ತುತ ಸಾಲಿನಲ್ಲಿ ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ಅನುಷ್ಠಾನಗೊಳಿಸಲು ಸರ್ವಸದಸ್ಯರ ಪ್ರೋತ್ಸಾಹ ಮತ್ತು ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಡಾ. ಅಗ್ರಜ್, ಡೊಮಿನಿಕ್, ರೋಶನ್, ರಕ್ಷಣ್ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು. ಗಣೇಶ್ ಮತ್ತು ಡೇರಿಲ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ನೂತನ ಕಾರ್ಯದರ್ಶಿ ಅಕ್ಷಯ್ ರೈ ವಾರ್ಷಿಕ ವರದಿ ಮಂಡಿಸಿ, ವಂದಿಸಿದರು. ಪೂಜಾ ಕಾರ್ಯಕ್ರಮ ನಿರೂಪಿಸಿದರು.
ಪದಾಧಿಕಾರಿಗಳ ವಿವರ : ಅರವಿನ್ ಡಿಸೋಜ (ದಂಡಾಧಿಕಾರಿ), ಹಾರ್ಧಿಕ್ (ಕೋಶಾಧಿಕಾರಿ), ಪ್ರೋಯ್ಲ ಮೋರಸ್ (ಸಾರ್ವಜನಿಕ ಸಂಪರ್ಕ ಅಧಿಕಾರಿ), ನಿರ್ದೇಶಕರು : ಕಾವ್ಯ (ಸಮಾಜ ಸೇವೆ), ಅಭಿಜಿತ್ (ವೃತ್ತಿಪರ ಸೇವೆ), ಶ್ರದ್ಧಾ ಕೇಶವ್ (ಸಂಸ್ಥೆ ಸೇವೆ), ವರುಣ್ ರೈ (ಅಂತರಾಷ್ಟ್ರೀಯ ಸೇವೆ).