ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ ಎಂಆರ್‌ಪಿಎಲ್ ಕಾನೂನು ವಿಭಾಗದ ಸಹಯೋಗದಲ್ಲಿ ಎಂಆರ್‌ಪಿಎಲ್ ತರಬೇತಿ ಕೇಂದ್ರದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. 
ಜಿಲ್ಲೆ

ಎಂಆರ್‌ಪಿಎಲ್‌ನಲ್ಲಿ ಸಂವಿಧಾನ ದಿನಾಚರಣೆ

Mangaluru - Shravan Kumar Nala

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ ಎಂಆರ್‌ಪಿಎಲ್ ಕಾನೂನು ವಿಭಾಗದ ಸಹಯೋಗದಲ್ಲಿ ಎಂಆರ್‌ಪಿಎಲ್ ತರಬೇತಿ ಕೇಂದ್ರದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ.ಅನಿಲ್ ಭೀಮಸೇನ್ ಕತ್ತಿ ಮಾತನಾಡಿ, ಭಾರತೀಯ ಸಂವಿಧಾನದ 14, 19 ಮತ್ತು 21 ನೇ ವಿಧಿಗಳನ್ನು ಸುವರ್ಣ ತ್ರಿಕೋನ ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ದೇಶದ ಸಂವಿಧಾನದ ಚೌಕಟ್ಟಿನ ಮೂಲಾಧಾರವೆಂದು ಪರಿಗಣಿಸಲ್ಪಟ್ಟಿರುವ ಮೂಲಭೂತ ಹಕ್ಕುಗಳಾಗಿವೆ. ಭಾರತದ ಸಂವಿಧಾನ ಎಂದಿಗೂ ಗಾಳಿ ಗೋಪುರವಲ್ಲ, ಐಕ್ಯತೆ ಮತ್ತು ಭಾವೈಕತೆ ಸಾರುವ ಶ್ರೇಷ್ಠ ಕಾನೂನಾಗಿದೆ. ಇಂದಿನ ಯುವಜನತೆ ಸಂವಿಧಾನದ ಕುರಿತು ಅರಿವು ಮೂಡಿಸಿಕೊಂಡು ಅದನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಎಂದರು.

ಎಂಆರ್‌ಪಿಎಲ್ ರಿಫೈನರಿ ನಿರ್ದೇಶಕ ನಂದಕುಮಾರ್ ವಿ ಪಿಳ್ಳೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎಂಆರ್‌ಪಿಎಲ್‌ನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್, ಅಧಿಕಾರಿಗಳಾದ ಗಣೇಶ ಎಸ್ ಭಟ್, ಕಾನೂನು ವಿಭಾಗದ ಸಿಜಿಎಂ ಅಲ್ ರಫೀಕ್ ಮೊಯ್ದೀನ್, ಮೆಟೀರಿಯಲ್ಸ್ ವಿಭಾಗದ ಜಿಎಂ ಸತೀಶ್ ಸತ್ಯನಾರಾಯಣ ಸಹಿತ ಹಲವರು ಇದ್ದರು.

ಎಂರ್‌ಪಿಎಲ್ ಕಾನೂನು ವಿಭಾಗದ ಡಿಜಿಎಂ ಪ್ರಫುಲ್ ಮೋಹನ್ ವಂದಿಸಿದರು. ಕಾನೂನು ವಿಭಾಗದ ಕವಿತಾ ಕಾರ್ಯಕ್ರಮ ನಿರೂಪಿಸಿದರು.