ಜಿಲ್ಲೆ

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ 51 ಕೋಟಿ ರೂ. ಲಾಭ

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ವಾ.31ಕ್ಕೆ ಕೊನೆಗೊಂಡ 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ತೆರಿಗೆ ನಂತರದಲ್ಲಿ 51 ಕೋಟಿ ರೂ. ಲಾಭ ಗಳಿಸಿದೆ.

ಕಂಪನಿ ನಿರ್ದೇಶಕರ ಮಂಡಳಿ ಸಭೆಯಲ್ಲಿ 2024-25ನೇ ಸಾಲಿನ 4ನೇ ತ್ರೈವಾಸಿಕ ಹಾಗೂ 2024-25ನೇ ಹಣಕಾಸು ವರ್ಷದ ಫಲಿತಾಂಶ ಅನುಮೋದಿಸಲಾಯಿತು.

ಕಂಪನಿ ತೆರಿಗೆ ಪೂರ್ವ ಲಾಭ 2023-24ನೇ ಸಾಲಿನಲ್ಲಿ 5,521 ಕೋಟಿ ರೂ. ಇದ್ದರೆ, 2024-25ನೇ ಸಾಲಿನಲ್ಲಿ 113 ಕೋಟಿ ರೂ.ಗೆ ಕುಸಿದಿದೆ. ತೆರಿಗೆ ನಂತರದ ನಿವ್ವಳ ಲಾಭ 2023-24ರಲ್ಲಿ 3,596 ಕೋಟಿ ರೂ. ಇತ್ತು. 202425ನೇ ಸಾಲಿನಲ್ಲಿ ಕಾರ್ಯಾಚರಣೆ ಆದಾಯ 1,09,277 ಕೋಟಿ ರೂ. ಆಗಿದ್ದರೆ, 202324ರಲ್ಲಿ 1,05,223 ಕೋಟಿ ರೂ.ಗಳಷ್ಟಿತ್ತು.

2024-25ನೇ ಸಾಲಿನ ವಾ.31ಕ್ಕೆ ಅಂತ್ಯವಾಗುವ 4ನೇ ತ್ರೈವಾಸಿಕದಲ್ಲಿ ಎಂಆರ್‌ಪಿಎಲ್‌ಗೆ ತೆರಿಗೆ ನಂತರದ ಲಾಭ 363 ಕೋಟಿ ರೂ. (2023-24ರ ಇದೇ ಅವಧಿಯಲ್ಲಿ 1,137 ಕೋಟಿ ರೂ.) ಆಗಿದೆ. ಕಾರ್ಯಾಚರಣೆ ಮೂಲಕ ಬಂದ ಆದಾಯ 27,601 ಕೋಟಿ ರೂ. ಆಗಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.