ನಮಗೆ ಹಲವಾರು ಸಾರ್ವಜನಿಕರಿಂದ ದೂರು ಬಂದಿತ್ತು, ದೇವಸ್ಥಾನ, ರೈಲ್ವೇ ಟ್ರಾಕ್, ಬಾರ್ ಸುತ್ತ ಕುಡುಕರು ಕುಳಿತು ತೊಂದರೆ ಕೊಡುತ್ತಾರೆ, ತಮಾಷೆ ಮಾಡುವುದು, ಕಮೆಂಟ್ ಮಾಡುವುದು ಈ ಬಗ್ಗೆ ದೂರುಗಳಿದ್ದವು. ಆ ಹಿನ್ನೆಲೆಯಲ್ಲಿ ಡಿಸಿಪಿ(ಕಾನೂನು ಸುವ್ಯವಸ್ಥೆ) ಹರಿರಾಂ ಶಂಕರ್ ಹಾಗೂ ಡಿಸಿಪಿ(ಅಪರಾಧ) ವಿನಯ್ ಗಾಂವ್ಕರ್ ಅವರ ನೇತೃತ್ವದಲ್ಲಿ ಎರಡು ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ. ಇನ್ನು ಮುಂದೆ ನಿರಂತರವಾಗಿ ಎಲ್ಲಾ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಲಿದೆ, ಗಾಂಜಾ ಮಾದಕ ವಸ್ತು ಸೇವಿಸುವ ಹಾಟ್‌ಸ್ಪಾಟ್‌ಗಳನ್ನೂ ಗುರುತಿಸಿದ್ದೇವೆ ಎಂದು ಕಮಿಷನರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಖ್ಯವಾಗಿ ಯುವಜನರು, ವಿದ್ಯಾರ್ಥಿಗಳು ಇಂತಹ ಜಾಲಕ್ಕೆ ಸಿಲುಕದಂತೆ ಪೋಷಕರು ಎಚ್ಚರ ವಹಿಸಿ ಎಂದೂ ಮನವಿ ಮಾಡಿದ್ದಾರೆ.
ವಿನಾಕಾರಣ ಮೈದಾನದಲ್ಲಿ ಕುಳಿತುಕೊಳ್ಳುವುದು, ಪಾರ್ಕ್, ಬಸ್ ಸ್ಟಾಂಡ್‌ನಲ್ಲಿ, ಗಾಡಿಗಳಲ್ಲಿ ಕುಳಿತುಕೊಂಡು ಮದ್ಯ, ಗಾಂಜಾ ಸೇವಿಸುವುದು, ಅನವಶ್ಯಕವಾಗಿ ರಾತ್ರಿ ಹೊತ್ತು ಓಡಾಡುವುದು ಇವೆಲ್ಲಾ ಮಾಡುವ ಹಾಗಿಲ್ಲ. ನಿಮ್ಮ ಕೆಲಸ ಮಾಡಿಕೊಂಡು ಮನೆಗೆ ಹೋಗಬೇಕು ಎಂದರು.
ಅವರೆಲ್ಲರನ್ನೂ ವಶಕ್ಕೆ ತೆಗೆದುಕೊಂಡು ವಿಳಾಸ, ಹೆಸರು ದಾಖಲಿಸಿ, ಫೊಟೊ ತೆಗೆದು ಎಚ್ಚರಿಕೆ ನೀಡಿ ಅವರ ಸಂಬಂಧಿಕರು, ಪೋಷಕರನ್ನು ಕರೆಯಿಸಿ ಅವರೊಂದಿಗೆ ಬಿಟ್ಟಿದ್ದಾರೆ. ಇದು ಮೊದಲ ಬಾರಿಯಾದ್ದರಿಂದ ಎಚ್ಚರಿಕೆ ನೀಡಲಾಗಿದೆ, ಮುಂದೆ ಸಿಕ್ಕಿದರೆ ಕೇಸು ಹಾಕಿ ಬಂಧಿಸುವುದಾಗಿ ಕಮಿಷನರ್ ಎಚ್ಚರಿಕೆಯನ್ನೂ ನೀಡಿದರು.
ಅಧಿಕಾರ ಸೇವಿಸಿದ ಎರಡು ದಿನಗಳಲ್ಲೇ ನಗರದ ಪಾಂಡೇಶ್ವರ ಹಾಗೂ ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನೂರಕ್ಕೂ ಅಧಿಕ ಕುಡುಕರು, ಅನುಮಾನಾಸ್ಪದವಾಗಿ ಸುತ್ತಾಡುತ್ತಿರುವವರ, ಕತ್ತಲ ಜಾಗದಲ್ಲಿ ಕೂತಿರುವವರನ್ನು ಪತ್ತೆ ಮಾಡಿದ್ದಾರೆ.
ಮಂಗಳೂರು: ವಿನಾಕಾರಣ ರಾತ್ರಿ ಹೊತ್ತಲ್ಲಿ ಓಡಾಡಿಕೊಂಡು, ಗಾಂಜಾ, ಮದ್ಯ ಸೇವಿಸುತ್ತಾ ನಾಗರಿಕರಿಗೆ ತೊಂದರೆ ಕೊಡುವಂತಹವರ ವಿರುದ್ಧ ನೂತನ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಖಡಕ್ ಕ್ರಮಕ್ಕೆ ಮುಂದಾಗಿದ್ದಾರೆ.