ಜಿಲ್ಲೆ

ಮಂಗಳೂರು ಸುರಿವ ಮಳೆ ನಡುವೆಯೂ ರೌಡಿ ಶೀಟರ್ ಗಳ ಬೆವರಿಳಿಸಿದ ಕಮಿಷನರ್

ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ಸಂಬಂಧಿಸಿದ 275 ರೌಡಿ ಶೀಟರ್ ಗಳ ಪರೇಡ್ ಬುಧವಾರ ಪೊಲೀಸ್ ಮೈದಾನದಲ್ಲಿ ನಡೆಯಿತು.

ಸುರಿವ ಮಳೆಯಲ್ಲೂ ರೌಡಿ ಶೀಟರ್ ಗಳನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ವಿಚಾರಣೆ ನಡೆಸಿ, ಇನ್ನು ಮುಂದೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಖಡಕ್ ಎಚ್ಚರಿಕೆ ನೀಡಿದರು.

ಡಿಡಿಸಿಪಿಗಳಾದ ಅನ್ಶುಕುಮಾರ್, ದಿನೇಶ್ ಕುಮಾರ್ ಸೇರಿದಂತೆ ಎಸಿಪಿ, ಇನ್ ಸ್ಪೆಕ್ಟರ್ ಗಳು ಉಪಸ್ಥಿತರಿದ್ದರು.