ಜಿಲ್ಲೆ

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನ ಗುರು ನಮನ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಟ್ ಅಭಿಮತ

ಹರೀಶ ಎಂ.

ಮಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನ ನೀಡಲಾಗಿದೆ. ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯಂದು ಗುರು ಪರಂಪರೆಯನ್ನು ವಿಶೇಷವಾಗಿ ಸ್ಮರಿಸಿ ಪೂಜಿಸಲಾಗುತ್ತದೆ ಎಂದು ಪದವಿನಂಗಡಿಯ ಪೇರ್ಲಗುರಿ ಶ್ರೀಕೃಷ್ಣ ಭಟ್ ಹೇಳಿದರು.


ಆನ್‌ಲೈನ್ ಮೂಲಕ ನಡೆಯುವ ಭಗವದ್ಗೀತೆ, ರಾಮಾಯಣ, ಲಲಿತ ಸಹಸ್ರನಾಮ ಸಮೂಹಗಳ ವತಿಯಿಂದ ಗುರು ಚೇತನಾ ಶ್ರೀಕೃಷ್ಣ ಭಟ್ ಅವರಿಗೆ ಭಾನುವಾರ ಗುರು ಪೌರ್ಣಮಿಯಂದು ಅವರ ಮನೆಯಲ್ಲಿ ನಡೆದ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ದೀಪ ಪ್ರಜ್ವಲನೆಯ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಶಂಕರಾಚಾರ್ಯರಿಗೆ ಫಲ ಸಮರ್ಪಣೆ ಮಾಡಿದ ಬಳಿಕ ಭಜನೆ, ಸ್ತ್ರೋತ್ರಗಳೊಂದಿಗೆ ಕಾರ್ಯಕ್ರಮ ಜರುಗಿತು.


ಸಮೂಹದ ಸದಸ್ಯರು ಗುರುಗಳ ಪಾದಪೂಜೆ ಮಾಡಿ ಮುಡಿ ತುಂಬಿಸಿದರು. ಶಿಕ್ಷಕಿ ವಾಣಿ ಹರೀಶ್ ಸ್ವಾಗತಿಸಿದರು. ಮಂಜುಳಾ ವಂದಿಸಿದರು. ಭಾರತಿ ಕಾರ್ಯಕ್ರಮ ನಿರೂಪಿಸಿದರು.