ಜಿಲ್ಲೆ

ಎನ್‌ಎಂಪಿಎ ಎಸ್‌ಸಿ-ಎಸ್‌ಟಿ ನೌಕರರ ಕಲ್ಯಾಣ ಸಂಘದ ಮಹಾಸಭೆ

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಕಾರ್ಯಾಚರಿಸುತ್ತಿರುವ ಪರಿಶಿಷ್ಟ ಜಾತಿ-ಪಂಗಡದ ನೌಕರರ ಕಲ್ಯಾಣ ಸಂಘದ ಮಹಾಸಭೆ ಇತ್ತೀಚೆಗೆ ಪಿ.ಟಿ.ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಎಲ್ಲಾ ಸಂಘದ ಸದಸ್ಯರು ಸ್ವಾರ್ಥ ಬಿಟ್ಟು ಸಮಾಜದಲ್ಲಿ ಆರ್ಥಿಕ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಅಂಬೇಡ್ಕರ್ ಅವರ ಆದರ್ಶದಂತೆ ನಡೆದುಕೊಳ್ಳುವಂತೆ ಪಿ.ಟಿ.ಕೃಷ್ಣಪ್ಪ ಹೇಳಿದರು.

ಕಳೆದ ವರ್ಷ ನಿವೃತ್ತರಾದ ನೌಕರರನ್ನು ಸನ್ಮಾನಿಸಲಾಯಿತು. ಪ್ರಾಧಿಕಾರದ ನೌಕರ ಸುಕುಮಾರ್ ನಾಯ್ಕ ಅವರ ಪುತ್ರಿ ಮಂಜುಶ್ರೀ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಟೂರಿಸಂ ಪದವಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದಿದ್ದು, ಅವರನ್ನು ಗೌರವಿಸಲಾಯಿತು.

ನೂತನ ಆಡಳಿತ ಮಂಡಳಿ: 2025-27ನೇ ಸಾಲಿಗೆ ಕಾರ್ಯಾಧ್ಯಕ್ಷ ಪಿ.ಟಿ.ಕೃಷ್ಣಪ್ಪ, ಅಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷ ಸುಕುಮಾರ್ ನಾಯ್ಕ, ಚಂದ್ರ ನಾಯ್ಕ, ಸುಷ್ಮ, ಪ್ರ.ಕಾರ್ಯದರ್ಶಿ ಬಿ.ಎನ್.ಪುನೀತ್, ಖಜಾಂಜಿ ಸೋಮಯ್ಯ ನಾಯ್ಕ, ಕಾರ್ಯದರ್ಶಿ ಚಂದ್ರಯ್ಯ ನಾಯ್ಕ, ಜೊತೆ ಕಾರ್ಯದರ್ಶಿ ಲತಾ ಎಸ್.ಬಿ., ಪ್ರಮೋದ ಕುಂದರ್ ಅವಿರೋಧವಾಗಿ ಆಯ್ಕೆಯಾದರು.

ಲೀಲಾ ವಾರ್ಷಿಕ ವರದಿ ವಾಚಿಸಿದರು. ಖಜಾಂಜಿ ಚಂದ್ರಯ್ಯ ನಾಯ್ಕ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸುಬ್ರಹ್ಮಣ್ಯ ಟೀಚರ್ ಸ್ವಾಗತಿಸಿದರು. ಲತಾ ವಂದಿಸಿದರು. ಧನ್‌ಪಾಲ್ ಟೀಚರ್ ಕಾರ್ಯಕ್ರಮ ನಿರೂಪಿಸಿದರು.