ಮಂಗಳೂರು: ತಂದೆ ಮತ್ತು ಮಗ ಸೇರಿ ಕಾರ್ ಸ್ಟ್ರೀಟ್ ನ ವೀರವೆಂಕಟೇಶ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದ ವಿನಾಯಕ ಕಾಮತ್ ಎಂಬವರನ್ನು ಚೂರಿಯಿಂದ ಇರಿದು ಬುಧವಾರ ತಡ ರಾತ್ರಿ ಕೊಲೆ ಮಾಡಿದ್ದಾರೆ.
ಅಪಾರ್ಟ್ಮೆಂಟ್ ಗೇಟ್ ಬಳಿ ನಗರ ಪಾಲಿಕೆಯವರು ಸಿಮೆಂಟ್ ಹಾಕಿದ್ದು ಅದರ ಮೇಲೆ ಕಾರು ಚಲಾಯಿಸಿದ ವಿಚಾರದಲ್ಲಿ ಕೃಷ್ಣಾನಂದ ಕಿಣಿ ಮತ್ತು ಮಗ ಅವಿನಾಶ್ ಕಿಣಿ ಗಲಾಟೆ ಮಾಡಿ ವಿನಾಯಕ ಕಾಮತ್ ಅವರಿಗೆ ಚೂರಿಯಿಂದ ಎದೆಗೆ ಇರಿದು ಕೊಲೆ ಮಾಡಿದ್ದಾರೆ.
ಬಂದರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.