ಜಿಲ್ಲೆ

ಮೇರಿಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಜಿಲ್ಲಾ ಮಟ್ಟದ ಫುಟ್‌ಬಾಲ್ ಪಂದ್ಯಾವಳಿ

ಮಂಗಳೂರು: ಮೇರಿಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ‘ಎಂ.ಸಿ.ಸಿ.ಎಸ್ ಕಿಕ್‌ಸ್ಟಾರ್ಟ್ ಕ್ವೀನ್ಸ್ 2024’ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿ.ಬಿ.ಎಸ್.ಸಿ. ಹಾಗೂ ಐ.ಸಿ.ಎಸ್.ಸಿ ಶಾಲೆಗಳ ಫುಟ್‌ಬಾಲ್ ಪಂದ್ಯಾವಳಿ ಶನಿವಾರ ಜರುಗಿತು.


ಸೈಂಟ್ ಡೊಮಿನಿಕ್ ಶಾಲೆಯ ಪ್ರಾಂಶುಪಾಲ ಫಾದರ್ ಅರುಣ್ ಡಿಸೋಜ, ಶಾಲಾ ಪ್ರಾಂಶುಪಾಲೆ ಸಿಸ್ಟರ್ ಮೆಲಿಸ್ಸಾ, ವಿಜಯ್‌ಮರಿ ಸುಪೀರಿಯರ್ ಸಿಸ್ಟರ್ ಆಶಾ ಪ್ರೀಮ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರೀಮಾ ಡಿಕುನ್ಹಾ ಉಪಸ್ಥಿತರಿದ್ದರು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್, ಶಾಲೆಯ ಜಂಟಿ ಕಾರ್ಯದರ್ಶಿ ಭಗಿನಿ ಜೋಸ್‌ಫಿನ್ ಪಾಯಸ್ ಇನ್ನಿತರರು ಉಪಸ್ಥಿತರಿದ್ದರು.


ಪಂದ್ಯಾವಳಿಯಲ್ಲಿ 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮಣಿಪಾಲ್ ಸ್ಕೂಲ್ ಹಾಗೂ 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆ ಗೆಲುವು ಸಾಧಿಸಿತು.