ಮಂಗಳೂರು: ಮೇರಿಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯಲ್ಲಿ ಮೂರು ದಿನಗಳ ಕಾಲ ಶಾಲಾ ವಾರ್ಷಿಕೋತ್ಸವ ಜರುಗಿತು. ವಿಶ್ವ ಸಂಸ್ಥೆ ನೀಡಿದ ಸುಸ್ಥಿರ ಅಭಿವೃಧಿ ಗುರಿಗಳನ್ನಾಧರಿತ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಎಲ್ಲಾ ತರಗತಿಯ ವಿದ್ಯಾರ್ಥಿಗಳು ನೆರವೇರಿಸಿ ಕೊಟ್ಟರು.
ನ.29ರಂದು ಏಳನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ. ವಿಧ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ ರೂಪಕ, ಹಾಡು, ನಾಟಕಗಳನ್ನು ಅತ್ಯಂತ ಕ್ರಿಯಾತ್ಮಕವಾಗಿ ಪ್ರದರ್ಶಿಸಿ, ಮನೋರಂಜನೆ ನೀಡುವ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಆತಿಥಿಯಾಗಿ ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಶಾಲೆಯ ಪ್ರೊ. ಮ್ಯಾಥ್ಯೂ ಸಿ. ನೈನನ್ ಪಾಲ್ಗೊಂಡಿದ್ದರು.
ನ.30ರಂದು ನಾಲ್ಕರಿಂದ ಆರನೇ ತರಗತಿಯ ಶಾಲಾ ವಾರ್ಷಿಕೋತ್ಸವ ನಡೆಯಿತು. ಸಂಚಾರ ಉಪ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಡಿ.1ರಂದು 1 ರಿಂದ 3 ನೇ ತರಗತಿಯ ವಿದ್ಯಾರ್ಥಿಗಳ ಶಾಲಾ ವಾರ್ಷಿಕೋತ್ಸವಕ್ಕೆ ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ.ಪೀಟರ್ ಗೊನ್ಸಾಲ್ವಿಸ್ ಮುಖ್ಯ ಅತಿಥಿಯಾಗಿದ್ದರು.
ಶಾಲೆಯ ಜಂಟಿ ಕಾರ್ಯದರ್ಶಿ ಆಶಾ ಪ್ರೇಮಾ, ಪ್ರಾಂಶುಪಾಲೆ ಮೆಲಿಸ್ಸ, ಆಡಳಿತಾಧಿಕಾರಿ ಕರಿಸ್ಸಿಮ, ರಕ್ಷಕ ಶಿಕ್ಷಕ ಸಂಘದ ಉಪಾದ್ಯಕ್ಷೆ ಕ್ಯಾರಲ್ ಪಾಯ್ಸ ಉಪಸ್ಥಿತರಿದ್ದರು.