ಜಿಲ್ಲೆ

ಮಂಗಳೂರು ಎಂಡಿಎಂಎ ಸಮೇತ ಆರೋಪಿ ಬಂಧನ

ಹರೀಶ ಎಂ.

ಮಂಗಳೂರು : ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಮೇತ ಆರೋಪಿಯನ್ನು ಪೊಲೀಸರು ವಾಮಂಜೂರು ಮೈದಾನದಲ್ಲಿರುವ ಶೇಂದಿ ಅಂಗಡಿ ಬಳಿ ಬಂಧಿಸಿದ್ದಾರೆ.


ಪೆರ್ಮನ್ನೂರ ಗ್ರಾಮ ನಿತ್ಯಾಧರ ಚರ್ಚ್ ಬಳಿ ದಾರಂದ ಬಾಗಿಲು ಮನೆ ನಿವಾಸಿ ದಾವೂದು ಪರ್ವೇಜ್(37) ಬಂಧಿತ ಆರೋಪಿ.


ಸುಮಾರು 10 ಗ್ರಾಂ ತೂಕದ, 15,000 ರೂ. ಮೌಲ್ಯದ ಎಂಡಿಎಂಎ ಹಾಗೂ ಹಾಗೂ 810 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯ.ಎನ್.ನಾಯಕ್ ನೇತೃತ್ವದಲ್ಲಿ ಆ್ಯಂಟಿ ಡ್ರಗ್ ಟೀಂನ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಅರುಣ್ ಕುಮಾರ್ ಡಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.