ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ಜರುಗಿದ ಪಾಲಿಕೆಯ ಹಾಲಿ ಆಡಳಿತ ಅವಧಿಯ ಕೊನೆಯ ಸಾಮಾನ್ಯ ಸಭೆಯ ಬಹುಭಾಗ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಸುದೀರ್ಘ ವಾಕ್ಸಮರಕ್ಕೆ ಆಹುತಿಯಾಯಿತು.
ಮೇಯರ್ ಮನೋಜ್ ಕುಮರ್ ಸಭಾ ಅಧ್ಯಕ್ಷತೆ ವಹಿಸಿದ್ದರು.
ಆರೋಪ, ಪ್ರತ್ಯಾರೋಪಗಳು ಅತಿಯಾಗಿ ಗೊಂದಲ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಮೇಯರ್ ಎರಡು ಬಾರಿ ಮುಂದೂಡಿದರು. ಸಭೆಯ ಕೊನೆಯ ಸುಮಾರು 1.30 ಗಂಟೆಯಲ್ಲಿ ಕೆಲವು ಪ್ರಮುಖ ತೀರ್ಮಾನಗಳಿಗೆ ಅನುಮೋದನೆ ನೀಡಲಾಯಿತು.
ಉಪ ಮೇಯರ್ ಭಾನುಮತಿ, ಆಯುಕ್ತ ರವಿಚಂದ್ರ ನಾಯಕ್ ಇದ್ದರು.