ಅದೊಂದು ಕಾಲವಿತ್ತು ನಿಸರ್ಗರಿಗೆ ನಡೆದಾಡಲು ಕಷ್ಟವಿತ್ತು . ವ್ಹೀಲ್ ಚೇರ್ ನಲ್ಲಿ ಕಾರಿನ ಬಳಿಯಿಂದ ಕಾಯ೯ಕ್ರಮ ಕ್ಕೆ ಬರುತ್ತಿದ್ದ ಈ ಮುಖದಲ್ಲಿ ಅದಮ್ಯ ಉತ್ಸಾಹ, ಲವಲವಿಕೆ ಇದ್ದು, ಈಸಿ ಜೈಸುತ್ತೇನೆ ಎಂದು ಧೃಢ ಚಿತ್ರದಿಂದ ಸಾವನ್ನು ಎದುರಿಸಿ ಸಾವಿನ ಅಂತರವನ್ನು ವೃದ್ಧಿಸಿಕೊಂಡು ಸಮಾಜಕ್ಕಾಗಿ ಬದುಕಿದ ಮಹಾನ್ ಚೇತನ ದಾಮಣ್ಣನಿಗೆ ಚರಮಾಂಜಲಿ.
ಯಕ್ಷಗಾನ ಸಂಘಟಕ, ಮೇಳದ ಯಜಮಾನ ನಾಗಿ ಬಾಳಿ ಬದುಕಿದ ಬೋಳೂರು ದೋಗ್ರ ಪೂಜಾರಿ ಹಾಗೂ ಚಂದ್ರಾವತಿ ದಂಪತಿಯ ಸುಪುತ್ರನಾಗಿ ಜನಿಸಿ, ಇಂದು ಚರಿತ್ರೆ ನಿರ್ಮಿಸಿ ಹರಿಸಾಯುಜ್ಯ ಎನ್ನು ಸೇರಿದ್ದಾರೆ. ತಂದೆಯವರಿ ಗಿದ್ದ ಯಾಜಮಾನ್ಯದ ಗುಣ ಇವರಲ್ಲೂ ಛಾಪು ಮೂಡಿಸಿದೆ. ಎಲ್ಲೆಡೆಯೂ ಆ ಗುಣವನ್ನು ಹೊಂದಿಯೇ ಬದುಕಿನ ಕೊನೆಯ ಉಸಿರಿನ ತನಕವೂ ಬದುಕಿ ತುಳುವಾಲ ರ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದಿದ್ದಾರೆ.
ಸಿವಿಲ್ ಕಂಟ್ರಾಕ್ಟರ್ ಆಗಿ ಉದ್ಯಮಿ ಯಾಗಿದ್ದರೂ ಭಾಷಾ ಪ್ರೇಮಿಯಾಗಿ ತುಳುವಿಗಾಗಿ ಸದಾ ಚಿಂತನೆಗಳನ್ನು ನಡೆಸುತ್ತಾ ಆ ಬಗೆಯ ಹೋರಾಟಗಳನ್ನು ಸಂಘಟಿಸುತ್ತಾ ದೇಶದ ಕೇಂದ್ರ ಸ್ಥಾನ ದೆಹಲಿಯನ್ನು ತಲುಪಿ ಸಂಸತ್ತಿನ ಕದತಟ್ಟಿ 8ನೇ ಪರಿಚ್ಛೇದಕ್ಕೆ ಸೇರಿಸಲು ತುಳುವರ ಧ್ವನಿಯಾಗಿದ್ದರು. ತಮ್ಮ ದೈನಂದಿನ ವ್ಯಾಪಾರ ವಹಿವಾಟುಗ ಳನ್ನು ಬದಿಗೊತ್ತಿ ಭಾಷೆಗಾಗಿ ತುಡಿಯುತ್ತಿದ್ದರು.
ಸುವರ್ಣ ಮಹೋತ್ಸವದ ವರೆಗೆ ಕುಡ್ಲ ,ತುಳು ಕೂಟವನ್ನ ತಲುಪಿಸಿದರು. ಸ್ವತಃ ತಾನೇ 4 ದಶಕಗಳ ಕಾಲ ಅಧ್ಯಕ್ಷನ ನೆಲೆಯಲ್ಲಿ ಕಾರ್ಯಕರ್ತ ನಂತೆ ದುಡಿದರು. ಕಳೆದ ವರ್ಷದಂತೂ ತಿಂಗಳಿಗೊಂದರಂತೆ ಬಂಗಾರ್ ಪರ್ಬ ಸರಣಿ ವೈಭವೊ ಎಂಬ ನೂತನ ಸರಣಿ ತುಳು ಕಾರ್ಯಕ್ರಮಗಳನ್ನು ನಡೆಸಿ ಬರುವ ದಿನಗಳಲ್ಲಿ ಅದರ ಸಮಾರೋಪ ಸಮಾರಂಭವನ್ನೂ ನಡೆಸಲು ರೂಪು - ರೇಷೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು. ಈ ರೀತಿಯ ನಿಖರ - ಅಂಕಿ ಅಂಶಗಳು, ಬದ್ಧತೆಗಳಿಗೆಲ್ಲಾ ಅವರಿಗೆ ದೊರಕಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಾನಗರ ಸಂಘಚಾಲಕ ರ ಜವಾಬ್ದಾರಿ. ಹಾಗಾಗಿ, ಎಲ್ಲದರ ಬಗ್ಗೆಯೂ ವಿಶೇಷ ಕಾಳ ಜಿಯೂ, ಅದ್ಭುತ ನೆನಪಿನಶಕ್ತಿ ಅವರನ್ನು ಪ್ರಬುದ್ಧ ಗೊಳಿಸುತ್ತಿತ್ತು.
ಒಂದು ಕಾಲಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಗಿತವಾಯಿತು. ಆಗಲೂ ಅದರ ಪುನಃಸ್ಥಾಪನೆ ಗೆ ತನ್ನ ಮಿತ್ರರ ಮೂಲಕ ಪ್ರಯತ್ನಿಸಿ ಯಶಸ್ವಿಯಾಗಿ ಅದರ ಬೆಳವಣಿಗೆ ಯನ್ನು ಕಂಡು ಹರ್ಷಿಸಿದವರಲ್ಲಿ ನಿಸರ್ಗ ರು ಮೊದಲಿಗರು.
ತುಳು ಒಕ್ಕೂಟ (ರಿ)ನ ಉಪಾಧ್ಯಕ್ಷರು, ಹಾಗೂ ತುಳುಕೂಟ (ರಿ) ಕುಡ್ಲದ ಹಾಲಿ ಅಧ್ಯಕ್ಷರಾಗಿರುತ್ತಾ ಕಾರ್ಯಾವಧಿ ಯಲ್ಲೇ ಗತಿಸಿದ ದಾಮಣ್ಣ ಇನ್ನು ನೆನಪು ಮಾತ್ರ.
ತಮ್ಮ ತಂದೆಯವರ ನೆನಪಿನಲ್ಲಿ ದೋಗ್ರ ಪೂಜಾರಿ ಅಧ್ಯಯನ ಕೇಂದ್ರ ವನ್ನು ಸ್ಥಾಪಿಸಿ ಅದರ ಆಶ್ರಯದಲ್ಲಿ ಓರ್ವ ಹಿರಿಯ, ಖ್ಯಾತ ಕಲಾವಿದರನ್ನು ಗುರುತಿಸಿ ದೊಡ್ಡ ಮೊತ್ತ ದ ಸನ್ಮಾನ ನಿಧಿಯೊಂದಿಗೆ ಸನ್ಮಾನಿಸಿ, ಹಿರಿಯ ಕಲಾವಿದರ ತಾಳಮದ್ದಳೆ ಕೂಟಗಳನ್ನು ಆಯೋಜಿಸಿ, ಸಮರ್ಥ ಸಂಘಟಕನಾಗಿ ಮುಂಚೂಣಿ ಯಲ್ಲಿ ನಿಂತು 45 ವರ್ಷ ಕಾಲ ನಡೆಸುತ್ತಾ ಬರುವುದೆಂದರೆ ಸುಲಭಸಾಧ್ಯ ಕಾರ್ಯವಲ್ಲ. ಅನೇಕ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳು ಅಚ್ಚುಗೊಳ್ಳ ಲು ಕಾರಣಕರ್ತ ರಾಗಿದ್ದಾರೆ, ಈಗ ಕೆಲವು ತುಳು ಕೂಟದ ಕಛೇರಿಯಲ್ಲಿ ಲಭ್ಯವಿದೆ. ಅಲ್ಲೂ ಒಂದು ತುಳು ಸಂಗ್ರಹಗಳ ಗ್ರಂಥಾಲಯವೂ ಇದೆ.
ಮರೋಳಿ ಸೂರ್ಯನಾರಾಯಣ ದೇವಳದ ಆಡಳಿತ ಮೊಕ್ತೇಸರರಾಗಿ, ಕಂಕನಾಡಿ ಗರೋಡಿಯ ಆಡಳಿತ ದ್ರಸ್ಟಿಯಾಗಿ, ಗೋಕರ್ಣನಾಥೇಶ್ವರ ಬ್ಯಾಂಕಿನ ಅಧ್ಯಕ್ಷರಾಗಿ, ಎಸ್ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾಗಿ ,ಕಂಕನಾಡಿ ಬಿಲ್ಲವ ಸಂಘದ ಸ್ಥಾಪಕರಾಗಿ …..ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎಂಬದಕ್ಕೆ ದಾಮಣ್ಣ ಉಪಮೆಯಾಗಿ ನಿಲ್ಲುತ್ತಾರೆ.
ತಮ್ಮ ಹಿರಿಯಣ್ಣ ವಿಶುಕುಮಾರ ರ ಜೊತೆ ನಿಂತು ಸಿನಿಮಾ ನಿರ್ದೇಶಕನಾಗಿ, ನಟನಾಗಿ ಮೆರೆದರು. ಗರೋಡಿಯ ನೂರೈವತ್ತನೇ ವರ್ಷದ ಕಾರ್ಯಕ್ರಮ ದಲ್ಲೂ ಸಕ್ರಿಯವಾಗಿ ಸೇವೆ ಸಲ್ಲಿ ಸಿದ್ದ ದಾಮಣ್ಣನಿಗೆ ಪ್ರ ಶಸ್ತಿಗಳು ರಾಶಿರಾಶಿ ಯೆಂಬತೆ ಸಹಜವಾಗಿಯೇ ಹರಿದು ಬರುತ್ತಿತ್ತು.
"ವಿಶ್ವ ತುಳುವೆರೆ ಪರ್ಬ" ದಲ್ಲಿ ಇವರ ಪಾತ್ರ ನೆನಪಿನಾಳ ದಿಂದ ಮಾಸದು . ಗರೋಡಿಯಲ್ಲಿ ತುಳು ತಾಳಮದ್ದಳೆ ಸಪ್ತಾಹ, ತುಳು ಪುರಸ್ಕಾರ, ಸ ಹ್ಯಾದ್ರಿ ಕಾಲೇಜಿನಲ್ಲಿ ತುಳು ನಾಟಕಗಳ ಸರಣಿ ಹೀಗೆ ಈ ಪರ್ಬವನ್ನ ದಾಖಲಿಸಿ ಹೊತ್ತಗೆಗೆ ತರವಲ್ಲೂ ಶ್ರಮಿಸಿದವರು ನಿಸರ್ಗರು.
ಹೀಗೆ ಹತ್ತು ಹಲವು ಮುಖಗಳಿಂದ ತಮ್ಮ ಮನೆ ಮಂದಿ ಯನ್ನೂ ಬಿಡದೆ ತುಳು ಭಾಷೆ ಸಾಹಿತ್ಯ ಸಂಸ್ಕೃತಿ ಗಾಗಿ ಶ್ರಮಿಸಿದ ದಾಮೋದರ ನಿಸರ್ಗರಿಗೆ ಅವರ ನಿಕಟ ಸಂಪರ್ಕವನ್ನು ಅನೇಕ ವರ್ಷಗಳಿಂದ ಹೊಂದಿರುವ ನನ್ನ ಸಹಿತ , ದೇಶ -ವಿದೇಶಗಳಲ್ಲಿರುವ ತುಳು ಭಾಧವರ ಸಹಿತ ಎಲ್ಲರೂ ಅವರು ಮತ್ತೊಮ್ಮೆ ಹುಟ್ಟಿಬರಲಿ ಎಂದು ಆಶಿಸುತ್ತಾ ಶ್ರದ್ಧಾಂಜಲಿ ಅರ್ಪಿಸೋಣ.
ವರ್ಕಾಡಿ ರವಿ ಅಲೆವೂರಾಯ
ಪ್ರ.ಕಾರ್ಯದರ್ಶಿ
ತುಳು ಕೂಟ (ರಿ) ಕುಡ್ಲ