ಜಿಲ್ಲೆ

ಸಾಮೂಹಿಕ ಸಹಭಾಗಿತ್ವದಿಂದ ಸಮುದಾಯದ ಅಭಿವೃದ್ದಿ --ದ.ಕ.ಜಿಲ್ಲಾ ಮಡಿವಾಳರ ಸಂಘದ 86 ನೇ ವಾರ್ಷಿಕ ಮಹಾಸಭೆಯಲ್ಲಿ ಕರಿಂಜೆ ಶ್ರೀ ಆಶೀರ್ವಚನ

ಮಂಗಳೂರು: ಸೇವಾಬದ್ದತೆಯನ್ನು ಅರಿತುಕೊಂಡು ಸಾಮೂಹಿಕ ಸಹಭಾಗಿತ್ವದಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಸಮುದಾಯದ ಉನ್ನತಿ ಸಾಕಾರಗೊಳ್ಳುತ್ತದೆ ಎಂದು ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.'

ನಗರದ ಬಂಗ್ರಕುಳೂರಿನಲ್ಲಿ ಜರಗಿದ ದ.ಕ.ಜಿಲ್ಲಾ ಮಡಿವಾಳರ ಸಂಘದ 86 ನೇ ವಾರ್ಷಿಕ ಮಹಾಸಭೆ, ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಶೀರ್ವಚನ ನೀಡಿದ ಅವರು ಸಮಾಜಮುಖಿ ಚಿಂತನೆಗಳನ್ನು ಪ್ರತಿಯೋರ್ವರು ತಮ್ಮ ಬದುಕಿನ ಧ್ಯೇಯವಾಗಿ ಸ್ವೀಕರಿಸಿದಾಗ ಸಮುದಾಯದ ಮತ್ತು ಭಗವಂತನ ಪ್ರೀತಿ ಪ್ರಾಪ್ತಿಯಾಗುತ್ತದೆ. ಮಕ್ಕಳಲ್ಲಿ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಲಗೂನ್ ಕ್ಲೋತ್ ಪ್ರೈವೆಟ್ ಲಿಮಿಟೆಡ್ ಕಂಪೆನಿ ಬೆಂಗಳೂರು ಇದರ ಸೀನಿಯರ್ ಮ್ಯಾನೇಜರ್ ರಮೇಶ್ ಬಂಗೇರ, ಬೆಳ್ತಂಗಡಿ ಉಪವಲಯ ಅರಣ್ಯಾಧಿಕಾರಿ ರಂಜಿತ್ ಕುಮಾರ್ ಸಾರಡ್ಕ, ವಕೀಲೆ ಪ್ರತಿಮಾ ಎ.ದಾಸ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ಅಧ್ಕಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್.ಅವರು ಮಾತನಾಡಿ, ದ.ಕ. ಜಿಲ್ಲಾ ಮಡಿವಾಳ ಸಂಘ ಸಮಾಜದ ಶಕ್ತಿಯಾಗಿದೆ. ಇದನ್ನು ಇನ್ನಷ್ಟು ಬಲಯುತಗೊಳಿಸುವ ಕಾರ್ಯದಲ್ಲಿ ನಾವೆಲ್ಲರೂ ಇನ್ನೂ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ರಜಕ ಯೂತ್ಸ್ ಅಧ್ಯಕ್ಷ ಸಂಪತ್ ಕೊಂಡಾಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾಂಜಲಿ ಉಪಸ್ಥಿತರಿದ್ದರು.

ಮುಖ್ಯ ಸಲಹೆಗಾರ ಆಶೋಕ್ ಪೊಳಲಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಮ ಬಂಗೇರ ಮಂಕುಡೆ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಶಶಿಧರ ಕೊಂಡಾಣ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ರಾಜೇಶ್ ಕುಂದರ್ ವಂದಿಸಿದರು.

ಸಾಧಕರಾದ ನಿಶಾನ್ ಕರುಣಾಕರ ನಂತೂರು, ವೆಂಕಪ್ಪ ಸಾಲಿಯಾನ್ ಮಿಜಾರು, ಸದಾಶಿವ ಕುಂದರ್ ಬಿಜೈ ಹಾಗೂ ಉಮೇಶ್ ಶಿರಿಯಾ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕವಾಗಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ದೀಕ್ಸಿತಾ ರಾಕೇಶ್ ಹಾಗೂ ರಾಕೇಶ್ ಪಚ್ಚನಾಡಿ ನಿರೂಪಿಸಿದರು. ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಸ್ತೂರಿ ಭಾಸ್ಕರ ಸಾಲಿಯಾನ್, ಪ್ರೇಮಾ ಆಶೋಕ್ ಪೊಳಲಿ,ಜಲಜಾ ಗುರುಪುರ,ಆನಂದ ಕೆ. ತೊಕ್ಕೊಟ್ಟು, ಅಭಿನಂದನಾ ಪತ್ರ ವಾಚಿಸಿದರು. ಮೋಹನ್ ಕುಮಾರ್ ಅಳಪೆ, ಬಿ.ಎಂ. ಸಾಲಿಯಾನ್,ಕೇಶವ ಕುಂದರ್ ಭಾಸ್ಕರ್ ಬೇಕಲ್, ಜೀನೇಂದ್ರ ಮಾಣಿ, ರಾಮಚಂದ್ರ ಕುಂದರ್ ಕುಳಾಯಿ, ಯೋಗಿಶ್ ಕುಳಾಯಿ, ಆಶಾ ಜಿನೇಂದ್ರ, ಸುಜಾತ ಪ್ರದೀಪ್ ಸಾಲ್ಯಾನ್,ಲತಾ ಪ್ರಕಾಶ ಸಾಲಿಯಾನ್ ,ಶ್ವೇತಾ ರವಿ ಕ್ಕೆಬೆಟ್ಟು, ,ರಾಜ ಎಂ. ಸಾಲಿಯಾನ್, ಅರತಿ ಕಾಟಿಪಳ್ಳ, ಶೈಲೇಶ್, ಪ್ರವೀಣ್ ಸಾಲ್ಯಾನ್, ಕಿರಣ್, ವರದರಾಜ್ ಉಜಿರೆ, ಸುರೇಶ್ ವಿಟ್ಲ,ಉಪಸ್ಥಿತರಿದ್ದರು.