ಜಿಲ್ಲೆ

ಲ್ಯಾಂಡ್ ಲಿಂಕ್ಸ್ ಮನೆಯೊಂದರ ಆವರಣಗೋಡೆಗೆ ಬಸ್ ಡಿಕ್ಕಿ

ಹರೀಶ ಎಂ.

ಮಂಗಳೂರು: ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್‌ನಲ್ಲಿ ಶನಿವಾರ ಸಂಜೆ ವೇಳೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಆವರಣ ಗೋಡೆಗೆ ಢಿಕ್ಕಿಯಾಗಿದೆ. ಅದೃಷ್ಟಾವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

ಲ್ಯಾಂಡ್ ಲಿಂಕ್ಸ್ - ಬಜಾಲ್‌ಪಡ್ಪು ನಡುವೆ ಸಂಚರಿಸುವ ನರ್ಮ್ ಸಿಟಿ ಬಸ್ ಆಗಿದ್ದು, ಸಂಜೆ ಸುಮಾರು 4.30ರ ಸುಮಾರಿಗೆ ಘಟನೆ ನಡೆದಿದೆ.

ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್‌ನ ಕೊನೆಯ ಸ್ಟಾಪ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ, ಪ್ರಯಾಣ ಆರಂಭಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು, ಪಕ್ಕದ ಮನೆಯೊಂದರ ಆವರಣ ಗೋಡೆಯನ್ನು ದಾಟಿ ಮುಂದಕ್ಕೆ ಸಾಗಿದ್ದು, ಮನೆಯ ಟೆರೇಸಿಗೆ ಹೋಗುವ ಮೆಟ್ಟಿಲಿಗೆ ಢಿಕ್ಕಿಯಾಗಿ ನಿಂತಿದೆ. ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಘಟನೆ ನಡೆಯವಾಗ ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಸೇರಿ ಬೆರಳೆಣಿಕೆ ಮಂದಿ ಮಾತ್ರ ಪ್ರಯಾಣಿಕರಿದ್ದರು. ಯಾವುದೇ ದೂರು ದಾಖಲಾಗಿಲ್ಲ.