ಜಿಲ್ಲೆ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಮಹಾರಥೋತ್ಸವ

ಮಂಗಳೂರು: ಕುಲಶೇಖರದಲ್ಲಿರುವ ಅತ್ಯಂತ ಪುರಾತಣ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀ ವೀರ ನಾರಾಯಣ ದೇವಸ್ಥಾನದಲ್ಲಿ ಬುಧವಾರ ಮಹಾರಥೋತ್ಸವ ಜರುಗಿತು.

ಬೆಳಗ್ಗೆ 8 ಗಂಟೆಗೆ ಶ್ರೀ ದೇವರಿಗೆ ಪುಣ್ಯಾಹ, ಕಲಶ ಪ್ರಧಾನ ಹೋಮ, ಗಣಪತಿ ಹೋಮ, ಕಲಶಾಭಿಷೇಕ ಶ್ರೀ ನಾಗದೇವರಿಗೆ ಪಂಚಾಮೃತ, ನಾಗತಂಬಿಲ, ಪರಿವಾರ ದೈವಗಳಿಗೆ ಪರ್ವ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ನಂತರ ಬಲಿ ಹೊರಟು ಮಹಾರಥೋತ್ಸವ, ಪಲ್ಲಪೂಜೆ, ಬಟ್ಟಲು ಕಾಣಿಕೆ, ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ ಭಜನಾ ಕಾರ್ಯಕ್ರಮ, ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಫೆ.13ರಂದು ಬೆಳಗ್ಗೆ 9 ಗಂಟೆಯಿಂದ ಪುಣ್ಯಾಹ, ಗಣಪತಿ ಹೋಮ, ಶ್ರೀ ವಿರನಾರಾಯಣ ದೇವರಿಗೆ ತುಳಸಿ ಅರ್ಚನೆ, ಸಾಮೂಹಿಕ ಆಶೇಷಾ ಬಲಿ, ತುಲಭಾರ ಸೇವೆ, ಮಹಾಪೂಜೆ, ಅನ್ನಪ್ರಸಾದ ಮಧ್ಯಾಹ್ನ ಭಜನಾ ಕಾರ್ಯಕ್ರಮ ,ಸಂಜೆ 6 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಫೆ. 14ರಂದು ಬೆಳಗ್ಗೆ ಗಂಟೆ 8 ರಿಂದ ಭಜನಾ ಕರ್ಯಕ್ರಮ ಲಕ್ಷ್ಮೀ ಹೃದಯ ಪೂಜೆ, ಮಹಾಪೂಜೆ, ಅನ್ನಪ್ರಸಾದ ಜರಗಲಿದೆ. ಫೆ. 15ರಂದು ಬೆಳಗ್ಗೆ ಶುದ್ಧಿಕಲಶ, ಮಂತ್ರಾಕ್ಷತೆ, ಮಹಾಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.