ಜಿಲ್ಲೆ

ಕುಲಶೇಖರ ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ

ಮಂಗಳೂರು: ನಗರದ ಕುಲಶೇಖರ ಸೇಕ್ರೆಡ್ ಹಾರ್ಟ್ ಶಾಲೆ ಬಳಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಬಸ್‌ನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಬೈಕ್ ಸವಾರ ಚಂದನ್(20) ಮೃತಪಟ್ಟವರು. ಖಾಸಗಿ ಬಸ್‌ನ್ನು ಓವರ್ ಟೇಕ್ ಮಾಡುವ ಸಂದರ್ಭ ಚೇತನ್ ಕುಮಾರ್ ಎಂಬವರು ಚಲಾಯಿಸುತ್ತಿದ್ದ ಬೈಕ್‌ನ ಬಲ ಭಾಗಕ್ಕೆ ಡಿಕ್ಕಿ ಹೊಡೆದು ಎಡ ಬದಿಗೆ ಬಸ್‌ನಡಿಗೆ ಬಿದ್ದಿದ್ದಾರೆ. ಈ ಸಂದರ್ಭ ಬಸ್‌ನ ಬಲ ಹಿಂಭಾಗದ ಚಕ್ರ ಚಂದನ್ ಅವರ ತಲೆಯ ಮೇಲೆ ಚಲಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ವಾಮಂಜೂರು ಕಡೆಯಿಂದ ಕುಲಶೇಖರ ಕಡೆಗೆ ಪ್ರಮೋದ್ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಬಸ್‌ನ ಬಲ ಭಾಗದಿಂದ ವಾಹನಗಳು ಓವರ್‌ಟೇಕ್ ಮಾಡುವಾಗ ಬಸ್ಸನ್ನು ನಿಧಾನ ಮಾಡದೆ ನಿರ್ಲಕ್ಷೃದಿಂದ ಚಲಾಯಿಸಿರುವುದು ಮತ್ತು ಬೈಕ್‌ನ್ನು ನಿಯಂತ್ರಿಸದೆ ಓವರ್‌ಟೇಕ್ ಮಾಡಿದ ಪರಿಣಾಮ ಅಪಘಾತಕ್ಕೆ ಕಾರಣವಾಗಿದೆ. ಈ ಬಗ್ಗೆ ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.