ಮಂಗಳೂರು : ನಗರದ ಕೆಪಿಟಿ ಬಳಿಯ ಎಸ್‌ಕೆಎಸ್ ಅಪಾರ್ಟ್‌ಮೆಂಟ್ ಜಂಕ್ಷನ್ ಬಳಿ ಗುರುವಾರ ಬಳಗ್ಗೆ ಬೈಕ್‌ಗೆ ಕಾರು ಢಿಕ್ಕಿ ಹೊಡೆದು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಬಿ. ಅವರು ಚಿಕಿತ್ಸೆ ಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ಅವರು ಗುರುವಾರ ಬೆಳಗ್ಗೆ 8.45 ಕುಂಟಿಕಾನದಿಂದ ಕೆಪಿಟಿ ಕಡೆಗೆ ಬೈಕ್‌ನಲ್ಲಿ ಸಾಗುತ್ತಿದ್ದಾಗ ಕೆಪಿಟಿ ಕಡೆಯಿಂದ ಎಸ್‌ಕೆಎಸ್ ಅಪಾರ್ಟ್‌ಮೆಂಟ್ ಕಡೆಗೆ ಹೋಗಲೆಂದು ಕಾರು ಚಾಲನೆ ಮಾಡುತ್ತಿದ್ದ ಡಾ. ಮಹಿಮಾ ಎನ್ನುವವರು ತೆರೆದ ಡಿವೈಡರ್‌ನಲ್ಲಿ ಯಾವುದೇ ಸೂಚನೆ ನೀಡದೆ ಏಕಾಏಕಿ ಮುಂದಕ್ಕೆ ಚಲಾಯಿಸಿದ್ದಾರೆ. ಈ ವೇಳೆ ಬೈಕ್‌ಗೆ ಕಾರು ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಮತ್ತು ಕಾರು ಚಾಲಕಿ ಆಸ್ಪತ್ರೆಗೆ ದಾಖಲಿಸಿದ್ದರು.
ಕಾರು ಚಾಲಕಿಯ ನಿರ್ಲಕ್ಷೃವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದ್ದು, ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.