ಮಂಗಳೂರು: ವನ್ ಕಾರ್, ವನ್ ವರ್ಲ್ಡ್ ಪರಿಕಲ್ಪನೆಯಲ್ಲಿ, ಹೊಸ ವಿನ್ಯಾಸದೊಂದಿಗೆ ನ್ಯೂ ನಿಸ್ಸಾನ್ ಮೆಗ್ನೈಟ್ ಕಾರು ಶನಿವಾರ ಕೊಟ್ಟಾರಚೌಕಿಯ ಪೈ ಸೇಲ್ಸ್ ನಿಸ್ಸಾನ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಹಾಂಗ್ಯೋ ಐಸ್‌ಕ್ರೀಮ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ. ಪೈ ಹಾಗೂ ಉಪಾಧ್ಯಕ್ಷೆ ದೀಪಾ ಪೈ ಅವರು ಜತೆಯಾಗಿ ನ್ಯೂ ನಿಸ್ಸಾನ್ ಮೆಗ್ನೈಟ್ ಕಾರನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಪ್ರದೀಪ್ ಜಿ. ಪೈ, ಕಳೆದ 37 ವರ್ಷಗಳಿಂದ ಪೈ ಸೇಲ್ಸ್ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಗಣಪತಿ ಪೈ ಅವರು 42 ವರ್ಷಗಳಿಂದ ಉದ್ಯಮ ಕ್ಷೇತ್ರದಲ್ಲಿ ಮುನ್ನಡೆದು, ಗ್ರಾಹಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅರುಣ್ ಪೈ ಹಾಗೂ ಅಕ್ಷಯ್ ಪೈ ಅವರು ಉದ್ಯಮ ಮುನ್ನಡೆಸಿಕೊಂಡು ಹೋಗಬೇಕು. ಗುಣಮಟ್ಟದ ಉತ್ಪನ್ನಗಳನ್ನು ನೀಡಿದಾಗ ಗ್ರಾಹಕರ ಸ್ಪಂದನೆ ಉತ್ತಮವಾಗಿರುತ್ತದೆ. ನಿಸ್ಸಾನ್ ಮೆಗ್ನೈಟ್ ಕಾರು ಅತ್ಯುತ್ತಮವಾಗಿದ್ದು, ನವರಾತ್ರಿ ಹಾಗೂ ಮುಂಬರುವ ದೀಪಾವಳಿಯ ಸುಸಂದರ್ಭದಲ್ಲಿ ಖರೀದಿಗೆ ಸಕಾಲ ಎಂದರು.
ದೀಪಾ ಪೈ ಮಾತನಾಡಿ, ನ್ಯೂ ನಿಸ್ಸಾನ್ ಮೇಗ್ನೈಟ್ ಹೊಸ ಫೀಚರ್ಸ್ ಸೇರ್ಪಡೆಗೊಂಡು ಜನ ಸಾಮಾನ್ಯರ ಕೈಗೆ ಲಭಿಸುವ ಕಾರು ಆಗಿದೆ. ಕಾರು ಖರೀದಿಯ ಕನಸ್ಸು ಕಾಣುತ್ತಿರುವ ಪ್ರತಿಯೊಬ್ಬರೂ ಇದರತ್ತ ಒಲವು ತೋರಿಸಬಹುದು ಎಂದರು.
ಪೈ ಸೇಲ್ಸ್ ನಿಸ್ಸಾನ್‌ನ ವ್ಯವಸ್ಥಾಪಕ ನಿರ್ದೇಶಕ ಗಣಪತಿ ಪೈ ಹಾಗೂ ನಿರ್ದೇಶಕ ರತ್ನಾಕರ ಪೈ ಮೊದಲಾದವರು ಉಪಸ್ಥಿತರಿದ್ದರು.
ಪೈ ಸೇಲ್ಸ್ ನಿಸ್ಸಾನ್‌ನ ನಿರ್ದೇಶಕರಾದ ಅರುಣ್ ಪೈ ಸ್ವಾಗತಿಸಿದರು. ಅಕ್ಷಯ್ ಪೈ ವಂದಿಸಿದರು. ಪ್ರೀಸ್ಟನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.
ನಿಸ್ಸಾನ್ ಮೇಗ್ನೈಟ್‌ನ ವಿಶೇಷತೆ
ನ್ಯೂ ನಿಸ್ಸಾನ್ ಮೇಗ್ನೈಟ್ ಕಾರು ಸನ್‌ರೈಸ್ ಕಾಪ್ಪರ್ ಆರೆಂಜ್ ಬಣ್ಣದಲ್ಲಿ ಲಭ್ಯವಿದೆ. ಆರು ಏರ್ ಬ್ಯಾಗ್ ಒಳಗೊಂಡಿದೆ. ಲೆದರ್ ಸೀಟ್‌ಗಳು, ಇಂಟೆಲಿಜೆಂಟ್ ಕೀ, 360 ಡಿಗ್ರಿ ಕ್ಯಾಮರಾ, ಪ್ಲಾಸ್ಮಾ ಕ್ಲಸ್ಟರ್ ಐಯೋನೈಸರ್, ವಿಸ್ತಾರವಾದ ಲೈಟಿಂಗ್ಸ್ ಮೊದಲಾದ ಸೌಲಭ್ಯಗಳನ್ನು ಒಳಗೊಂಡಿದೆ. 65ಕ್ಕೂ ಅಧಿಕ ದೇಶಗಳ ರಸ್ತೆಗಳಲ್ಲಿ ಕಾರು ಓಡಲು ಸಿದ್ಧವಾಗಿದೆ.