ಮಂಗಳೂರು: ಧರ್ಮೋಪದೇಶ ನೀಡುವಾಗ ಹಠಾತ್ತನೆ ಪ್ರಜ್ಞಾಹೀನರಾಗಿ ಆಸ್ಪತ್ರೆಗೆ ದಾಖಲಾದ ಜರ್ಮನ್ ಪ್ರಜೆ ಫಾದರ್ ವೊಲ್ಗಾೃಂಗ್ ಲಿಯಾನ್ಹಾರ್ಡ್(65) ಅವರಿಗೆ ಮಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಸುಧಾರಿತ ಹೃದಯ ಚಿಕಿತ್ಸೆ ನೀಡಿ, ಫೇಸ್ ಮೇಕರ್ ಅಳವಡಿಸಲಾಯಿತು.
ಫಾದರ್ ಲಿಯಾನ್ಹಾರ್ಡ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ಅವರ ಹೃದಯವು ಬಡಿತವು ಅತ್ಯಂತ ಕಡಿಮೆಯಿತ್ತು. ನಿಮಿಷಕ್ಕೆ ಕೇವಲ 38-40 ಬಡಿತದಷ್ಟಿತ್ತು. ಪರೀಕ್ಷೆ ನಡೆಸಲಾಗಿ, ಹೃದಯದಲ್ಲಿ ರಕ್ತಚಲನೆ ಸಂಪೂರ್ಣ ನಿರ್ಬಂಧಿತವಾಗಿರುವುದು ತಿಳಿದು ಬಂದಿತು. ರೋಗಿಗೆ ಹೈಪರ್ಟ್ರೋಫಿಕ್ ಅಬ್ಸ್ಟಕ್ಟಿವ್ ಕಾರ್ಡಿಯೋಮಯೋಪತಿ ಪತ್ತೆಯಾಯಿತು.
ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ಮಾತನಾಡಿ, ಇಂತಹ ಅತ್ಯಧಿಕ ಅಪಾಯದ ಹೃದಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆಸ್ಪತ್ರೆಯು ಸಾಕಷ್ಟು ಸಜ್ಜಾಗಿದೆ. ಅದು ಎಷ್ಟೇ ಸಂಕೀರ್ಣವಾಗಿದ್ದರೂ ಹೃದಯ ಆರೈಕೆಯಲ್ಲಿ ಇತ್ತೀಚಿನ ಪ್ರಗತಿಯನ್ನು ಬಳಸಿಕೊಂಡು ಚಿಕಿತ್ಸೆ ನೀಡಲು ನಾವು ಹೆಮ್ಮೆಪಡುತ್ತೇವೆ. ಲಿಯಾನ್ಹಾರ್ಡ್ ಅವರ ಪ್ರಕರಣವು ಸವಾಲಿನದ್ದಾಗಿತ್ತು, ಆದರೆ ನಮ್ಮ ನುರಿತ ಹೃದ್ರೋಗ ತಜ್ಞರು ಮತ್ತು ಸುಧಾರಿತ ವೈದ್ಯಕೀಯ ತಂತ್ರಜ್ಞಾನದ ಸಂಯೋಜನೆಯಿಂದಾಗಿ ನಾವು ಜೀವ ರಕ್ಷಕ ಚಿಕಿತ್ಸೆ ಒದಗಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಫಾದರ್ ಲಿಯಾನ್ಹಾರ್ಡ್ ಅವರ ಸ್ಥಿತಿಗೆ ಹೃದಯದ ಲಯವನ್ನು ಸ್ಥಿರಗೊಳಿಸಲು ಮತ್ತು ಭವಿಷ್ಯದ ಯಾವುದೇ ತೊಡಕುಗಳನ್ನು ತಡೆಗಟ್ಟಲು ಇಂಪ್ಲಾಂಟಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್’(ಐಸಿಡಿ) ಜೊತೆ ಶಾಶ್ವತ ಪೇಸ್ ಮೇಕರ್ ಅಳವಡಿಸುವ ಅಗತ್ಯವಿತ್ತು. ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಮನೀಶ್ ರೈ ಹೇಳಿದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಮಾತನಾಡಿ, ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗವು ಹೃದಯ ತಜ್ಞರ ಅತ್ಯಂತ ನುರಿತ ತಂಡವನ್ನು ಹೊಂದಿದೆ ಮತ್ತು ಹೃದಯದ ಲಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿರ್ವಹಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ರೋಗಿಗಳಿಗೆ ವಿಶ್ವದರ್ಜೆಯ ಆರೈಕೆಯನ್ನು ಒದಗಿಸಲು ನಾವು ಸಜ್ಜಾಗಿದ್ದೇವೆ ಎಂದರು.
ಫಾದರ್ ಲಿಯಾನ್ಹಾರ್ಡ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಪೇಸ್ ಮೇಕರ್ ನೆರವಿನಿಂದ ಅವರ ಹೃದಯದ ನಿರಂತರ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ, ಅವರು ಇನ್ನು ಮುಂದೆ ಮತ್ತಷ್ಟು ವಿಶ್ವಾಸದಿಂದ ತಮ್ಮ ದೈನಂದಿನ ಕರ್ತವ್ಯಗಳನ್ನು ಮುಂದುವರಿಸಲು ಅವಕಾಶವಿದೆ.