ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಜೀರ್ಣೋದ್ಧಾರ ಕೆಲಸದ ಸಲುವಾಗಿ ಪಾದುಕಾ ಶಿಲಾನ್ಯಾಸ ಹಾಗೂ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಕುಡುಪು ಕ್ಷೇತ್ರದ ತಂತ್ರಿಗಳಾದ ಕೃಷ್ಣರಾಜ ತಂತ್ರಿ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಾ.ಭರತ್ ಶೆಟ್ಟಿ ವೈ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಕೆ.ಮೋಹನ್ ಪ್ರಭು, ಸದಸ್ಯರುಗಳಾದ ಕೆ.ಸದಾಶಿವ ಶೆಟ್ಟಿ, ಹರೀಶ್ ಶೆಟ್ಟಿ (ಶಿಲ್ಪಾ), ಪುರುಷೋತ್ತಮ ಪೂಜಾರಿ, ಗಿರಿಜಾತೆ ಆರ್. ಭಂಡಾರಿ, ವೀಣಾ ಆಚಾರ್, ಉಮಾನಾಥ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಆಶಿಕ್ ಬಲ್ಲಾಳ್, ಕಾರ್ಯಾಧ್ಯಕ್ಷ ಅವಿನಾಶ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ, ಕೋಶಾಧಿಕಾರಿ ದೀಪಕ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಪಿ.ಎಸ್.ಪ್ರಕಾಶ್, ಮಾರ್ಗದರ್ಶಿ ಮಂಡಳಿಯ ರಾಮಣ್ಣ ಶೆಟ್ಟಿ ಮುಗಿಪು, ಡೊಂಬಯ್ಯ ದೇವಾಡಿಗ, ಮನಪಾ ಸದಸ್ಯರಾದ ಸುಮಂಗಲಾ ರಾವ್, ಗಾಯತ್ರಿ ರಾವ್, ಶರತ್ ಕುಮಾರ್, ಲೋಹಿತ್ ಅಮೀನ್, ಪಾಲಿಕೆ ಪ್ರತಿಪಕ್ಷ ನಾಯಕ ಅನಿಲ್ ಕುಮಾರ್, ಹಿರಿಯರಾದ ಕೆ.ಸಿ. ಆಳ್ವ, ಶೀನ ಶೆಟ್ಟಿ ಪಂಜಿಮೊಗರು, ಚಂದ್ರ ಶೆಟ್ಟಿ ಕೂಳೂರು, ಡಾ.ನರೇಶ್ ರೈ ದೆಪ್ಪುಣಿಗುತ್ತು, ಹರೀಶ್ ಮಲ್ಲಿ, ಸುಷ್ಮಾ ಮಲ್ಲಿ, ಮಾಜಿ ಮೇಯರ್ ಹರಿನಾಥ್ ಜೋಗಿ, ಆದಿ ಕ್ಷೇತ್ರ ಜಾರ ಗಡಿ ಪ್ರಧಾನ ಜತ್ತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮಾ.1ರಿಂದ 9ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.