ಮಂಗಳೂರು: ಪ್ರತಿಷ್ಠಿತ ಎಸ್ ಸಿ ಎಸ್ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ಕರ್ನಾಟಕ ಆಯುರ್ವೇದ ವೈದ್ಯಕೀಯ ವಿದ್ಯಾಲಯದಲ್ಲಿ ಮಂಗಳವಾರ 9ನೇ ರಾಷ್ಟ್ರೀಯ ಆಯುರ್ವೇದ ದಿನ ಆಚರಿಸಲಾಯಿತು.
ಪ್ರಥಮ ವರ್ಷದ ಬಿ ಎ ಎಂ ಎಸ್ ವಿದ್ಯಾರ್ಥಿಗಳ ಪ್ರಾಯೋಗಿಕ ಕೌಶಲ್ಯ ಅಭಿವೃದ್ಧಿಗಾಗಿ ಡಾ.ಮಹಾಂತೇಶ್. ಬಿ. ರಾಮಣ್ಣವರ್ ಅವರ ರಾಮಣ್ಣವರ್ ಸೇವಾ ಸಂಸ್ಥೆ ಬೈಲಹೊಂಗಲದ ವತಿಯಿಂದ ಒದಗಿಸಲಾದ ದೇಹವನ್ನು ಸಕಲ ಗೌರವದಿಂದ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿಯ ಬಿ ಎಂ ಕೆ ಆಯುರ್ವೇದ ವಿದ್ಯಾಲಯದ ರಚನಾ ಶಾರೀರ ವಿಭಾಗದ ಪ್ರಾಧ್ಯಾಪಕ ಡಾ.ಮಹಾಂತೇಶ್.ಬಿ ರಾಮಣ್ಣವರ್ ಉಪಸ್ಥಿತರಿದ್ದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರಿನ ಈಜಿ ಆಯುರ್ವೇದ ಆಸ್ಪತ್ರೆಯ ಸಂಸ್ಥಾಪಕ ಡಾ. ಜನಾರ್ದನ್ ವಿ ಹೆಬ್ಬಾರ್, ಎಸ್ ಸಿ ಎಸ್ ಸಮೂಹ ಸಂಸ್ಥೆಗಳ ಮುಖ್ಯ ಆಡಳಿತ ಅಧಿಕಾರಿ ಯು.ಕೆ. ಖಾಲಿದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಪ್ರಾಂಶುಪಾಲ ಡಾ.ರವಿ ರಾವ್ ಎಸ್, ಉಪ ಪ್ರಾಂಶುಪಾಲ ಡಾ. ಜೆಸಿಂತಾ ಮೀನಾ ಡಿಸೋಜ ಉಪಸ್ಥಿತರಿದ್ದರು.
ಡಾ. ಅರ್ಚನಾ ಅವರು ಸ್ವಾಗತಿಸಿ, ಡಾ.ಸಂತೋಷಿನಿ ಅವರು ವಂದಿಸಿದರು. ವಿದ್ಯಾಲಯದ ಅಂತಿಮ ವರ್ಷದ ಬಿಎಎಂಎಸ್ ವಿದ್ಯಾರ್ಥಿಗಳಾದ ಸಂಜನಾ, ಸೃಜನ, ದೀಪ ಹಾಗೂ ಅನ್ವಿತ್ ಪ್ರಾರ್ಥಿಸಿದರು . ಡಾ. ಕೃಪಾ ಡಿ ಕಾರ್ಯಕ್ರಮವನ್ನು ನಿರೂಪಿಸಿದರು.