ಜಿಲ್ಲೆ

ಜೈ ಭಾರತಿ ತರುಣ ವೃಂದದ ಮಹಾಸಭೆ ವಿಕ್ರಮ್ ನೂತನ ಅಧ್ಯಕ್ಷ

ಮಂಗಳೂರು: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜೈಭಾರತಿ ತರುಣ ವೃಂದ, ಉರ್ವ ಹೊಯಿಗೆಬೈಲ್ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಜರಗಿತು.


ಕಾರ್ಯದರ್ಶಿ ವಿಕ್ರಮ್ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ವರದರಾಜ್‌ಶ್ರೀಯಾನ್ ಲೆಕ್ಕಪತ್ರ ಮಂಡಿಸಿದರು. 2024-25ನೇ ಸಾಲಿನಲ್ಲಿ ಸಂಘದ ವಜ್ರಮಹೋತ್ಸವ ಆಚರಿಸುವುದೆಂದು ನಿರ್ಧರಿಸಲಾಯಿತು. ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು.
ನೂತನ ಪದಾಧಿಕಾರಿಗಳು


2024-25ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೇಶವ ಕರ್ಕೇರ (ಗೌರವ ಅಧ್ಯಕ್ಷ), ವಿಕ್ರಮ್ (ಅಧ್ಯಕ್ಷ), ಸತೀಶ್ ಪೂಜಾರಿ ಅಶೋಕನಗರ (ಉಪಾಧ್ಯಕ್ಷ), ಜಿತೇಂದ್ರ ದೇವಾಡಿಗ (ಪ್ರಧಾನ ಕಾರ್ಯದರ್ಶಿ), ಲತೀಶ್ ದೇವಾಡಿಗ (ಜತೆ ಕಾರ್ಯದರ್ಶಿ), ಸುನಿಲ್ ದೇವಾಡಿಗ (ಖಜಾಂಚಿ), ತೃಶಾಂತ್ (ಕ್ರೀಡಾ ಕಾರ್ಯದರ್ಶಿ), ತಿಲಕ್‌ರಾಜ್ (ಜತೆ ಕ್ರೀಡಾ ಕಾರ್ಯದರ್ಶಿ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾಶಿವ ಶೆಟ್ಟಿ, ದಾವನ್ ಕುಮಾರ್, ದೀಪಕ್ ದೇವಾಡಿಗ, ದೇವಿಪ್ರಸಾದ್ ಶೆಟ್ಟಿ, ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್, ಚೇತನ್, ಕೃಷ್ಣ ಶೆಟ್ಟಿ, ಕನಕದಾಸ್, ರಾಜೇಶ್ ಸಾಲ್ಯಾನ್, ಚರಣ್, ಗೋವರ್ಧನ್, ಅರುಣ್ ಕುಮಾರ್, ಅನಿಲ್ ಸಾಲ್ಯಾನ್, ವರದರಾಜ್ ಶ್ರೀಯಾನ್ ಹಾಗೂ ತೇಜಾಕ್ಷ ಸಾಲ್ಯಾನ್ ಅವರನ್ನುಆರಿಸಲಾಯಿತು.