ಮಂಗಳೂರು ಎಮ್ಮೆಕೆರೆಯಲ್ಲಿ ನಿರ್ಮಾಣಗೊಂಡಿರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ 
ಜಿಲ್ಲೆ

ನ.24 ರಂದು ಮಂಗಳೂರು ಅಂತಾರಾಷ್ಟ್ರೀಯಈಜುಕೊಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ; 3 ದಿನಗಳ ರಾಷ್ಟ್ರೀಯ ಹಿರಿಯರ ಚಾಂಪ್ಯನ್‌ಶಿಪ್ ಉದ್ಘಾಟನೆ

Mangaluru - Prakash MC Manjeshwar
  • ವಿಜಯವಾಣಿ ಸುದ್ದಿಜಾಲ ಮಂಗಳೂರು
  • ನಗರದ ಎಮ್ಮೆಕೆರೆಯಲ್ಲಿ 24.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳವನ್ನು ನ.24 ರಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
  • ಇದೇ ಸಂದರ್ಭದಲ್ಲಿ 19 ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪ್ಯನ್‌ಶಿಪ್‌ಗೆ ಹೊಸ ಈಜುಕೊಳದಲ್ಲಿ ಚಾಲನೆ ಹಾಗೂ ಈಜುಕೊಳದ ಮುಂಭಾಗದ ಖಾಲಿ ಜಾಗದಲ್ಲಿ ಸ್ಥಳೀಯ ಜನರ ಬೇಡಿಕೆಯಂತೆ ವಿವಿಧ ಕ್ರೀಡೆಗ ಳ ಸೌಕರ್ಯ, ವಾಕಿಂಗ್ ಟ್ರಾೃಕ್ ಒಳಗೊಂಡಿರುವ ಕ್ರೀಡಾ ಸಂಕೀರ್ಣಕ್ಕೆ ಭೂಮಿ ಪೂಜೆ ನೆರವೇರಲಿದೆ ಎಂದು ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
  • ಫಿನಾ ಮಾನದಂಡ
    ಅಂತಾರಾಷ್ಟ್ರೀಯ ಈಜು ಒಕ್ಕೂಟ (ಎಫ್‌ಐಎನ್‌ಎ) ನಿಗದಿಪಡಿಸಿದ ಮಾನದಂಡ ಆಧರಿಸಿ ಹೊಸ ಈಜುಕೊಳ ನಿರ್ಮಾಣಗೊಂಡಿದ್ದು, ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಪಡೆಯುವ ಸ್ಥಳೀಯ ಈಜುಗಾರರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ. ಸ್ಪರ್ಧಿಗಳ ಈಜುಕೊಳವು 50 ಮೀ. ಉದ್ದ, 25 ಮೀ. ಅಗಲ, 2.2 ಮೀ. ತನಕ ಆಳ ಇದೆ. ತರಬೇತಿ ಪಡೆಯುವವರಿಗಾಗಿ ನಿರ್ಮಿಸಿದ ಕೊಳ 25 ಮೀ. ಉದ್ದ, 10 ಮೀ.ಅಗಲ ಮತ್ತು 2.2 ಮೀ. ಆಳ ಇದೆ. ಪುಟಾಣಿಗಳ ಈಜುಕೊಳ 13.8 ಮೀ. ಉದ್ದ, 10 ಮೀ.ಅಗಲ ಹಾಗೂ 1.2 ಮೀ. ಆಳವಿದೆ.
  • ಸರ್ವ ವುವಸ್ಥೆ
    ಮಾದಕ ದ್ರವ್ಯ ಸೇವನೆ ಪರೀಕ್ಷೆ ಕೊಠಡಿ, ಸ್ಪರ್ಧಿಗಳಿಗೆ ವಾಸ್ತವ್ಯ ಕೊಠಡಿ, ವ್ಯಾಯಾಮ ಘಟಕ, ಜಿಮ್, ರೆಫ್ರಿಗಳ ಕೊಠಡಿ, ವೈದ್ಯಕೀಯ ಪರೀಕ್ಷೆ ಕೊಠಡಿ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸುಸಜ್ಜಿತ ಶೌಚಗೃಹ ನಿರ್ಮಿಸಲಾಗಿದೆ.
    ಜತೆಗೆ ವಿಶಾಲವಾದ ಪಾರ್ಕಿಂಗ್, ಕ್ರೀಡಾ ಸಂಕೀರ್ಣಕ್ಕೆ ಪೂರಕ ಶಾಪಿಂಗ್ ಕಾಂಪ್ಲೆಕ್ ವ್ಯವಸ್ಥೆ ಇದೆ. ಈಜು ಸಂಸ್ಥೆಯ ಋಆಜ್ಯ ಅಧ್ಯಕ್ಷ ಗೋಪಾಲ ಹುಸೂರು ಮತ್ತು ಪರಿಣಿತರ ತಂಡ ಉದ್ಘಾಟನೆ ಮೊದಲು ನ.15 ರಂದು ಮಂಗಳೂರಿಗೆ ಆಗಮಿಸಿ ನೂತನ ಕಟ್ಟಡ ಹಾಗೂ ರಾಷ್ಟ್ರೀಯ ಹಿರಿಯರ ಈಜು ಚಾಂಪ್ಯನ್‌ಶಿಪ್‌ನ ಸಿದ್ಧತೆಯನ್ನು ಪರಿಶೀಲಿಸಲಿದ್ದಾರೆ. ಹಿರಿಯರ ಚಾಂಪಿಯನ್‌ಶಿಪ್‌ನಲ್ಲಿ 850 ಸ್ಪರ್ಧಿಗಳು ಹಾಗೂ ಸುಮಾರು 150 ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ರಾಜ್ಯ ಈಜು ಸಂಸ್ಥೆಯ ತೇಜೋಮಯ ತಿಳಿಸಿದರು.
  • ಸ್ಮಾರ್ಟ್ ಸಿಟಿ ಯೋಜನೆ
    ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪ್ರಸ್ತಾವಿತ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಯೋಜನಾ ವೆಚ್ಚದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50:50 ಕೊಡುಗೆ ಇದೆ.
    ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಮಾಜಿ ಶಾಸಕ ಜೆ.ಆರ್.ಲೋಬೊ, ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ್, ಸ್ಮಾರ್ಟ್ ಸಿಟಿ ಯೋಜನೆಯ ಜನರಲ್ ಮ್ಯಾನೇಜರ್ ಅರುಣಪ್ರಭ ಉಪಸ್ಥಿತರಿದ್ದರು.

.........
ಕರಾವಳಿಯಲ್ಲಿ ಉತ್ತಮ ಈಜುಗಾರರ ದೊಡ್ಡ ಸಂಖ್ಯೆಯೇ ಇದೆ. ಆದರೆ ಅವರಿಗೆ ಇಲ್ಲಯ ತನಕ ಈ ಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ತರಬೇತಿ ಪಡೆಯಲು ಅವಕಾಶವಿರಲಿಲ್ಲ. ಈ ಕೊರತೆಯನ್ನು ಹೊಸ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿವಾರಿಸಿದೆ. ಕ್ರೀಡಾ ಉದ್ದೇಶಗಳಿಗಾಗಿ ತರಬೇತಿ ಪಡೆಯುವವರಿಗೆ ಇಲ್ಲಿ ಆದ್ಯತೆ ದೊರೆಯಲಿದೆ.

  • ಅರುಣ ಪ್ರಭ,
    ಜನರಲ್ ಮ್ಯಾನೇಜರ್, ಮಂಗಳೂರು ಸ್ಮಾರ್ಟ್ ಸಿಟಿ