ಜಿಲ್ಲೆ

ಅಂತರ್-ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾಟ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜು

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಮತ್ತು ಬೆಸೆಂಟ್ ಮಹಿಳಾ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾದ ಮಹಿಳಾ ಅಂತರ್-ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಮಾಲೀಕ ರವೀಂದ್ರ ಶೇಟ್ ಮಾತನಾಡಿ, ಕ್ರೀಡೆ ಶಿಸ್ತು, ಮಾನಸಿಕ ಸ್ಥೈರ್ಯ ಮತ್ತು ನಾಯಕತ್ವವನ್ನು ಕಲಿಸುತ್ತದೆ. ಇದು ಯಶಸ್ಸಿನ ತಳಹದಿ ಎಂದರು.

ಕ್ಯಾಂಪ್ಕೋ ಸಂಸ್ಥೆಯ ಜನರಲ್ ಮ್ಯಾನೇಜರ್ ರೇಶ್ಮಾ ಮಲ್ಯ ಮಾತನಾಡಿ, ಕಬಡ್ಡಿ ಪುರುಷ ಪ್ರಧಾನ ಕ್ರೀಡೆಯಲ್ಲ, ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಸೋಲು ಗೆಲುವಿಗಿಂತ ಆತ್ಮವಿಶ್ವಾಸ ಮುಖ್ಯ ಎಂದರು.

ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಉಜಿರೆಯ ಎಸ್‌ಡಿಎಂ ಕಾಲೇಜು ಹಾಗೂ ತೃತೀಯ ಸ್ಥಾನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಪಡೆದುಕೊಂಡಿದೆ.

ಬೆಸೆಂಟ್ ಮಹಿಳಾ ಕಾಲೇಜಿನ ಉಪಾಧ್ಯಕ್ಷೆ ಡಾ.ಮಂಜುಳಾ ಕೆ.ಟಿ, ಡಬ್ಯೂಎನ್‌ಎಸ್‌ನ ಕಾರ್ಯದರ್ಶಿ ಸುರೇಶ್ ಪೈ,ಡಬ್ಯೂಎನ್‌ಎಸ್‌ನ ನ ಅಧ್ಯಕ್ಷ ಮನೇಲ್ ಅಣ್ಣಪ್ಪ ನಾಯಕ್ , ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ., ಡಾ. ರಾಮಚಂದ್ರ ಪಾಟ್ಕರ್ ದೈಹಿಕ ಶಿಕ್ಷಣ ನಿರ್ದೇಶಕರು ಅಜ್ಜರಕಾಡು, ಐಕ್ಯೂಎಸಿ ಸಂಯೋಜಕ ಡಾ. ಸತೀಶ ಕೆ, ಕಾಲೇಜಿನ ದೈಹಿಕ ನಿರ್ದೇಶಕಿ ರೂಪತಿ ಎಂ, ಸದಸ್ಯರಾದ ಡಾ. ಲೋಕರಾಜ್ ವಿ.ಎಸ್ ಮತ್ತು ಕ್ರೀಡಾ ಕಾರ್ಯದರ್ಶಿ ರಚನಾ ಕೋಟ್ಯಾನ್ ಉಪಸ್ಥಿತರಿದ್ದರು.