ಜಿಲ್ಲೆ

ಎಂಆರ್‌ಪಿಎಲ್ ಹಿಂದಿ ರಾಷ್ಟ್ರೀಯ ವಿಚಾರ ಸಂಕಿರಣ

ಹರೀಶ ಎಂ.

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ ಹಿಂದಿ ಬಳಕೆಗಾಗಿ ಇತ್ತೀಚಿನ ತಾಂತ್ರಿಕ ಸಾಧನಗಳು ವಿಷಯದಲ್ಲಿ ರಾಷ್ಟ್ರೀಯ ಮಟ್ಟದ ಹಿಂದಿ ವಿಚಾರ ಸಂಕಿರಣ ಬುಧವಾರ ಜರುಗಿತು.

ಮುಖ್ಯ ಹಣಕಾಸು ಅಧಿಕಾರಿ ಯೋಗೀಶ್ ಎಸ್.ನಾಯಕ್ ವಿಚಾರ ಸಂಕಿರಣ ಉದ್ಘಾಟಿಸಿದರು.

ಟೋಲಿಕ್ ಮಂಗಳೂರಿನ ಸದಸ್ಯ ಕಾರ್ಯದರ್ಶಿ ಕೃಷ್ಣ ಕುಮಾರ್ ಯಾದವ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಹಿಂದಿ ಬೋಧನಾ ಯೋಜನೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್ ವರ್ಮಾ, ಪುದುಚೇರಿ ಸೆಂಟ್ರಲ್ ವಿವಿ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಸಿ.ಜೈಶಂಕರ್ ಬಾಬು ಉಪಸ್ಥಿತರಿದ್ದರು.

ಜನರಲ್ ಮ್ಯಾನೇಜರ್ ಸೌಮ್ಯಾ ಚಂದ್ರಕರ್ ಸ್ವಾಗತಿಸಿದರು. ಚೀಫ್ ಮ್ಯಾನೇಜರ್ ಡಾ.ಬಿ.ಆರ್.ಪೈ ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆಗೈದರು. ದೀಪ್ತಿ ಅತ್ತಾವರ ವಂದಿಸಿದರು. ಕಿರಿಯ ಅಧಿಕಾರಿ ಸಂದೀಪ್ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.

107 ಪಿಎಸ್ಯುಗಳು, ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಸಂಸ್ಥೆಗಳಿಂದ 176 ಮಂದಿ ಭಾಗವಹಿಸಿದ್ದರು.