ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ಉತ್ತರ ವಲಯ ಸಹಭಾಗಿತ್ವದಲ್ಲಿ ನಗರದ ಕೊಡಿಯಾಲ್‌ಬೈಲ್ ಬೆಸೆಂಟ್ ಆಂಗ್ಲ ಪ್ರೌಢ ಶಾಲೆಯಲ್ಲಿ ಮಂಗಳೂರು ಹೋಬಳಿ ಮಟ್ಟದ ಪ್ರೌಢ ಶಾಲಾ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟ ನಡೆಯಿತು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಕುಮಾರ್ ಉದ್ಘಾಟಿಸಿದರು. ಕೆನರಾ ಪ್ರೌಢ ಶಾಲೆ, ಡೊಂಗರಕೇರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ, ಲೇಡಿಹಿಲ್ ವಿಕ್ಟೋರಿಯಾ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಐರಿನ್ ಡಿ ಸಿಲ್ವಾ, ನಮ್ಮ ಶಾಲ ಸಂಚಾಲಕರಾದ ಡಾ. ಮಣೇಲ್ ಅರ್ಜುನ್ ನಾಯಕ್ ಹಾಗೂ ಮುಖ್ಯೋಪಾಧ್ಯಾಯಿನಿ ಶಾಂತಿ ಲೋಬೋ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೆ.ಅನಂತ್ ಮಲ್ಯ ಹಾಗೂ ಉಪಾಧ್ಯಾಕ್ಷರಾದ ವನಿತ ಕೆ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿಯರಾದ ಸೌಮ್ಯಾ ಸ್ವಾಗತಿಸಿದರು. ಚೇತನಾ ವೈಶಾಹ ವಂದಿಸಿದರು. ಈ ಪಂದ್ಯಾಟದಲ್ಲಿ 22 ಬಾಲಕರ ತಂಡ ಹಾಗೂ 9 ಬಾಲಕಿಯರ ತಂಡ ಭಾಗವಹಿಸಿದರು. ಶಾಲಾ ಶಿಕ್ಷಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ಶಿಕ್ಷಕಿ ಚೇತನಾ ವೈಶಾಹ ವಂದಿಸಿದರು.
ಲಿತಾಂಶ: ಬಾಲಕಿಯರ ವಿಭಾಗದಲ್ಲಿ ಲೇಡಿಹಿಲ್ ವಿಕ್ಟೋರಿಯಾ ಪ್ರೌಢ ಶಾಲೆ, ಉರ್ವ ಪ್ರಥಮ ಸ್ಥಾನ ಹಾಗೂ ಸಂತ ಆನ್ಸ್ ಪ್ರೌಢ ಶಾಲೆ, ಬೋಳಾರ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ವಿಭಾಗದಲ್ಲಿ ನೋಬೆಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂಜತ್ ಬೈಲ್ ಪ್ರಥಮ ಹಾಗೂ ಸಂತ ಲಾರೆನ್ಸರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೋಂದೆಲ್ ತಂಡ ದ್ವಿತೀಯ ಸ್ಥಾನ ಪಡೆಯಿತು
ಬಾಲಕರ ವಿಭಾಗದಲ್ಲಿ ನೋಬಲ್ ಸ್ಕೂಲ್‌ನ ಮೊಹಮ್ಮದ್ ರಫೀದ್ ಹಫೀದ್ ಬೆಸ್ಟ್ ಸೆಟ್ಟರ್, ಮೊಹಮ್ಮದ್ ಸಮೀರ್ ಬೆಸ್ಟ್ ಅಟೇಕರ್ ಹಾಗೂ ಸಂತ ಲಾರೆನ್ಸ್ ಸ್ಕೂಲ್‌ನ ಮೊಹಮ್ಮದ್ ಶಮಿ ಆಲ್‌ರೌಂಡರ್ ವೈಯುಕ್ತಿಕ ಪ್ರಶಸ್ತಿ ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್‌ನ ವೀಣಾ ಬೆಸ್ಟ್ ಸೆಟ್ಟರ್, ನಿಶಾ ಬೆಸ್ಟ್ ಅಟೇಕರ್, ಸೈಂಟ್ ಆ್ಯನ್ಸ್ ಹೈಸ್ಕೂಲ್ ಜಿತೀಶಾ ಆಲ್‌ರೌಂಡರ್ ವೈಯುಕ್ತಿಕ ಪ್ರಶಸ್ತಿ ಪಡೆದರು. ಪಂದ್ಯಾಟದಲ್ಲಿ 22 ಬಾಲಕರ ತಂಡ ಹಾಗೂ 9 ಬಾಲಕಿಯರ ತಂಡಗಳು ಭಾಗವಹಿಸಿದ್ದವು.
ಸಮಾರೋಪದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ನಾಗರಾಜ್ ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೆ. ಅನಂತ್ ಮಲ್ಯ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶಿಲ್ಪಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ವಂದಿಸಿದರು. ರತ್ನಾಕರ ರಾವ್ ಬಿ. ಕಾರ್ಯಕ್ರಮ ನಿರೂಪಿಸಿದರು.