ಜಿಲ್ಲೆ

ಕ್ರೀಡೆಯಿಂದ ಸದೃಢ ಆರೋಗ್ಯ ಸಾಧ್ಯ ಸರ್ಕಾರಿ ನೌಕರರ ಕ್ರೆಡಾಕೂಟದಲ್ಲಿ ಜಿಪಂ ಸಿಇಒ ಡಾ.ಆನಂದ್ ಕೆ. ಅಭಿಮತ

ಹರೀಶ ಎಂ.

ಮಂಗಳೂರು: ಸರ್ಕಾರಿ ನೌಕರರು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯ ಎಂದು ಜಿ.ಪಂ. ಸಿಇಒ ಡಾ.ಆನಂದ್ ಕೆ. ಹೇಳಿದರು.

ನಗರದ ಮಂಗಳಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರು ಕೆಲಸದ ಒತ್ತಡದಲ್ಲಿ ಆರೋಗ್ಯ ನಿರ್ಲಕ್ಷಿಸಬಾರದು. ದೇಹ ಮತ್ತು ಮನಸ್ಸನ್ನು ಸದೃಢಗೊಳಿಸಲು ಕ್ರೀಡೆ ಉತ್ತಮ ವ್ಯಾಯಾಮವನ್ನು ಒದಗಿಸುತ್ತದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ದೀಪ ಬೆಳಗಿಸಿದರು. ಕ್ರೀಡೆಯಿಂದ ಪರಸ್ಪರ ಸಾಮರಸ್ಯ ಕಾಯ್ದುಕೊಳ್ಳಲು ಸಾಧ್ಯ ಎಂದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾೃನ್ಲಿ ಅಲ್ವಾರಿಸ್ ಮುಖ್ಯ ಅತಿಥಿಯಾಗಿದ್ದರು. ಮನಪಾ ಆಯುಕ್ತ ರವಿಚಂದ್ರ ನಾಯಕ್, ತಾಲೂಕು ಘಟಕದ ಅಧ್ಯಕ್ಷರಾದ ಜಯರಾಜ್ ಜೈನ್, ಶಿವಾನಂದ ಆಚಾರ್ಯ, ವಿಮಲ್ ನೆಲ್ಯಾಡಿ, ಶಿವಪ್ರಸಾದ್ ಶೆಟ್ಟಿ, ಡಾ.ದೊರೆಸ್ವಾಮಿ, ಡಾ.ನಿತಿನ್ ಪ್ರಭು, ಪದಾಧಿಕಾರಿಗಳಾದ ಸುರೇಶ್ ನಾಯ್ಕ, ಅಂಬರೀಷ್ ಯು.ಕೆ., ಪದ್ಮನಾಭ ಜೋಗಿ, ಸುಧೀರ್ ಎ., ಪ್ರಸನ್ನ ಕುಮಾರ್ ಪಕ್ಕಳ ಎಂ., ಡಾ.ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಸ್ವಾಗತಿಸಿದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಪ್ರಸ್ತಾವನೆಗೈದರು. ಜಿಲ್ಲಾ ಕಾರ್ಯದರ್ಶಿ ಲತೇಶ್ ಎ. ವಂದಿಸಿದರು. ಶಿಕ್ಷಕ ಮೋಹನ್ ಶಿರ್ಲಾಲು ವಂದಿಸಿದರು. ಸುಮಾರು 800ಕ್ಕೂ ಅಧಿಕ ಮಂದಿ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.