ಮಂಗಳೂರು: ನಗರದ ಬೆಂದೂರ್‌ವೆಲ್‌ನಲ್ಲಿರುವ ಗ್ಲೋಬಲ್ ಅಕಾಡೆಮಿ ವತಿಯಿಂದ ‘ಗ್ಲೋಬಲ್ ಸ್ಪೋಕನ್ ಇಂಗ್ಲೀಷ್ ಕೋರ್ಸ್’ ಎಂಬ ಆನ್‌ಲೈನ್ ಕೋರ್ಸ್ ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ರಮ್ಯಾ ಆರ್. ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಟ್ರೈನರ್ಸ್ ಹಾಗೂ ಡೆವಲಪರ್ಸ್‌ಗಳ ಬಹುಕಾಲದ ಪ್ರಯತ್ನದ ನಂತರ ಆನ್‌ಲೈನ್ ಕೋರ್ಸ್ ಅನ್ನು ಪ್ರಾರಂಭಿಸಲಾಗುತ್ತಿದೆ. ಒಟ್ಟು 17 ಹಂತಗಳ ಈ ಕೋರ್ಸ್‌ನಲ್ಲಿ ಪ್ರತಿ ಹಂತದಲ್ಲೂ ಆಡಿಯೋ ಮತ್ತು ವಿಡಿಯೋ ಪಾಠಗಳು, ಆ್ಯಕ್ಟಿವಿಟಿ ರೂಂ, ವಿಚಾರ ವಿನಿಮಯ ರೂಂ, ಅಸೈನ್ಮೆಂಟ್ ಹೀಗೆ ವಿವಿಧ ಹಂತಗಳಿದೆ. ಬೆಳಗ್ಗೆ 5 ರಿಂದ ರಾತ್ರಿ 11ರ ತನಕ ತರಬೇತಿದಾರರು ಆನ್‌ಲೈನ್ ಮೂಲಕ ಲಭ್ಯವಿರುತ್ತಾರೆ. ಎಲ್ಲ 17 ಹಂತಗಳನ್ನು ಪೂರ್ಣಗೊಳಿಸಿದರೆ ನಿರರ್ಗಳವಾಗಿ ಇಂಗ್ಲೀಷ್‌ನಲ್ಲಿ ಮಾತನಾಡಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ಅತ್ಯಂತ ಪರಿಣಾಮಕಾರಿ ಸ್ಪೋಕನ್ ಇಂಗ್ಲೀಷ್ ಕೋರ್ಸ್ ಅನ್ನು ನೀಡಿ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಲು ಕಲಿಸುವುದೇ ನಮ್ಮ ಉದ್ದೇಶ ಮತ್ತು ಗುರಿ. ಯಾವುದೇ ಸಮಯದಲ್ಲಿ ಕೋರ್ಸ್‌ಗೆ ಸೇರಬಹುದು. ಜತೆಗೆ ಯಾವುದೇ ಉದ್ಯೋಗದಲ್ಲಿರುವ-ವಯಸ್ಸಿನ ಮಿತಿಯಿಲ್ಲದೆ ಆನ್‌ಲೈನ್ ಮೂಲಕವೇ ಇಂಗ್ಲೀಷ್ ಕಲಿಯುವ ವಿನೂತನ ಅವಕಾಶ ಇಲ್ಲಿದೆ. ನರ್ಸಿಂಗ್, ಟೆಕ್ನಿಕಲ್ ಟ್ರೈನಿಂಗ್ ಸಹಿತ ಖಾಸಗಿ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ನಾವು ಕೋರ್ಸ್ ಅನ್ನು ಒದಗಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ www.globalspokenenglish.com ಸಂಪರ್ಕಿಸಬಹುದು ಎಂದವರು ತಿಳಿಸಿದ್ದಾರೆ.
ಸಂಸ್ಥೆಯ ತರಬೇತಿದಾರರಾದ ಪ್ರಿಯಾ, ಪ್ರಗತಿ, ಪ್ರೀತಿ, ನೇಹಾ ಮತ್ತಿತರರು ಉಪಸ್ಥಿತರಿದ್ದರು.