ಜಿಲ್ಲೆ

ಅ.26-27ರಂದು ಕುಳಾಯಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಗಾಯತ್ರಿ ಸಂಗಮ ಕೋಟಿ ಗಾಯತ್ರಿ ಜಪಯಜ್ಞ

ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಗಾಯತ್ರಿ ಸಂಗಮ ಸಾಂಕ ಕೋಟಿ ಗಾಯತ್ರಿ ಜಪಯಜ್ಞವನ್ನು ಅ.27ರಂದು ನಗರದ ಕುಳಾಯಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಡೆಯಲಿದೆ ಎಂದು ಗಾಯತ್ರೀ ಸಂಗಮದ ಅಧ್ಯಕ್ಷ ಮಹೇಶ್ ಕಜೆ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವರ್ಧನೆ, ಸಂಘಟನೆ, ಸದಢ ರಾಷ್ಟ್ರ ಸ್ಥಾಪನೆ, ಬ್ರಹ್ಮ ತೇಜದ ಸಂವರ್ಧನೆ, ತನ್ಮೂಲಕ ಭಿನ್ನ ಪಥಗಳ, ಪಂಗಡಗಳ ಭೇದ ಮರೆತು ಬ್ರಾಹ್ಮಣರ ಐಕಮತ್ಯದ ಸಂಘಟನೆ ವಿಸ್ತರಿಸಿ ಸ್ವಸ್ಥ, ಸದಢ ಸಾಮರಸ್ಯದ ಸುಖ, ಶಾಂತಿ, ನೆಮ್ಮದಿಯ ವಿಶ್ವಗುರು ರಾಷ್ಟ್ರಸ್ಥಾಪನೆಯ ಗುರಿಯೊಂದಿಗೆ ಗಾಯತ್ರಿ ಸಂಗಮ ಕೈಗೊಳ್ಳಲಾಗಿದೆ.

ಕರಾವಳಿ ಸೇರಿದಂತೆ ದೇಶ ವಿದೇಶದಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣರು ಉಪಕರ್ಮದ ದಿನದಂದು ಸಂಕಲ್ಪ ದೀಕ್ಷೆ ತೆಗೆದುಕೊಂಡು ಗಾಯತ್ರಿ ಪಠಣ ಹಾಗೂ ಮಾತೆಯರು ಸರ್ವ ಮಂಗಲ ಮಾಂಗಲ್ಯೆ ಮಂತ್ರ ಪಠಣ ಆರಂಭಿಸಿದ್ದಾರೆ. ಎರಡು ತಿಂಗಳ ಅವಯಲ್ಲಿ ಈಗಾಗಲೇ ಕೋಟಿ ಸಂಖ್ಯೆಯಲ್ಲಿ ಗಾಯತ್ರಿ ಹಾಗೂ ಸರ್ವಮಂಗಲ ಮಂತ್ರ ಪಠಣವಾಗಿದೆ. ಇದರ ಯಜ್ಞ ಪ್ರಕ್ರಿಯೆ ಅ.26, 27ರಂದು ನಡೆಯಲಿದ್ದು, ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಶ್ರೀ ಕ್ಷೇತ್ರ ಚಿತ್ರಾಪುರದ ತಂತ್ರಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಕಷ್ಣರಾಜ ತಂತ್ರಿಗಳ ನೇತತ್ವದಲ್ಲಿ ಗಾಯತ್ರಿ ಯಜ್ಞ ನಡೆಯಲಿದೆ. ಹವ್ಯಕ, ಕೋಟ, ಕೋಟೇಶ್ವರ, ಕರ್ಹಾಡ, ಚಿತ್ಪಾವನ, ದೇಶಸ್ಥ, ಶಿವಳ್ಳಿ, ಸ್ಥಾನಿಕ ಅಲ್ಲದೆ ಬ್ರಾಹ್ಮಣ ಸಮಾಜದ ಎಲ್ಲ ಋತ್ವಿಜರು ಈ ಯಾಗದಲ್ಲಿ ಭಾಗವಹಿಸಿ ಪೂರ್ಣಾಹುತಿ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ ಎಂದರು.

ಗಾಯತ್ರೀ ಸಂಗಮದ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಮಾತನಾಡಿ, ಅ.26ರಂದು ಬೆಳಗ್ಗೆ 8.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪ್ರಾರ್ಥನೆ, ಗೋಪೂಜೆ, ಗಣಪತಿ ಹೋಮ, ದುರ್ಗಾ ಹೋಮ, ರುದ್ರ ಹೋಮ, ಕಷ್ಣ ಮಂತ್ರ ಹೋಮ, ಪವಮಾನ ಹೋಮ, ನಾಗದೇವರಿಗೆ ಅಭಿಷೇಕ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಯುವ ಘಟಕದ ನೇತತ್ವದಲ್ಲಿ ಆದಿತ್ಯ ಯುವ ಸಂಗಮ-ಹಳೆ ಬೇರು ಹೊಸ ಚಿಗುರು ಸಂವಾದ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಬ್ರಾಹ್ಮಣ ಅಭಿವದ್ಧಿ ನಿಗಮದ ಅಧ್ಯಕ್ಷ ಜಯಸಿಂಹ ಭಾಗವಹಿಸಲಿದ್ದಾರೆ. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಧ್ಯಾಹ್ನ 1ರಿಂದ ಗಾಯತ್ರಿ ಮಹಾತ್ಮೆ ಯಕ್ಷಗಾನ ತಾಳಮದ್ದಳೆ, ಸಂಜೆ 3.30ರಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಘಟಕದ ನೇತತ್ವದಲ್ಲಿ ವೇದ ಮಾತಾ ಗಾಯತ್ರೀ-ಸಂಸಾರ, ಸಂಸ್ಕಾರ, ಚಿಂತನೆ, ಸಾಕ್ಷಾತ್ಕಾರ ನಡೆಯಲಿದೆ. ಸಂಜೆ 5.30ರಿಂದ ಕಲಶ ಪ್ರತಿಷ್ಠೆ, ಅರಣೀ ಮಥನ, ಅಷ್ಟಾವಧಾನ ಯಜ್ಞ ಮಂಟಪದಲ್ಲಿ ನಡೆಯಲಿದೆ. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಪ್ರತಿಮಾ ಶ್ರೀಧರ್ ಅವರಿಂದ ನತ್ಯಾಮತ, ಕೆಮ್ಮಣ್ಣು ಸಹೋದರಿಯರಾದ ಶರಣ್ಯಾ ಮತ್ತು ಸುಮೇಧಾ ಅವರಿಂದ ಗಾನಾಮತ ನಡೆಯಲಿದೆ.

ಅ.27ರಂದು ಏಕ ಬಹತ್ ಯಜ್ಞಕುಂಡದಲ್ಲಿ ಗಾಯತ್ರಿ ಯಜ್ಞ ಆರಂಭಗೊಂಡು 10.30ಕ್ಕೆ ಯಜ್ಞದ ಪೂರ್ಣಾಹುತಿ ನಡೆಯಲಿದೆ. 11 ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ಮಹಾಸಭಾದ ಅಧ್ಯಕ್ಷರು ಹಾಗೂ ಕೋಟಿ ಗಾಯತ್ರಿ ಜಪಯಜ್ಞ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಹಾಗೂ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನದ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ ಎಂದರು.

ಈ ಸಂದರ್ಭ ಸಂಚಾಲಕ ಸುರೇಶ್ ರಾವ್, ಸ್ವಾಗತ ಸಮಿತಿಯ ರಾಜೇಂದ್ರ ಕಲ್ಬಾವಿ, ಎಂ.ಎಸ್. ಗುರುರಾಜ್, ಯಜ್ಞ ಸಮಿತಿಯ ಸೂರ್ಯನಾರಾಯಣ ಕಶೆಕೋಡಿ, ಯವ ಘಟಕದ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರ್, ಶ್ರೀಕರ್ ದಾಮ್ಲೆ ಉಪಸ್ಥಿತರಿದ್ದರು.