ಜಿಲ್ಲೆ

ಶಿಕ್ಷಣ ರಂಗದಲ್ಲಿ ಎಕ್ಸ್‌ಪರ್ಟ್ ಕಾಲೇಜು ದಾಖಲೆ ಫಲಿತಾಂಶ; ನೀಟ್ ಪ್ರವೇಶ ಪರೀಕ್ಷೆಯಲ್ಲಿ ನಿಖಿಲ್ ಸೊನ್ನದ್‌ಗೆ ದಕ್ಷಿಣ ಭಾರತದಲ್ಲೇ ಪ್ರಥಮ ಸ್ಥಾನ

ವಿಜಯವಾಣಿ ಸುದ್ದಿಜಾಲ ಮಂಗಳೂರು

ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಬಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರು ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ್ ಅಖಿಲ ಭಾರತ ಮಟ್ಟದಲ್ಲಿ 17ನೇ ಮತ್ತು ದಕ್ಷಿಣ ಭಾರತ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ರ‌್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ನೀಟ್ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದರೆ, ಮಂಗಳೂರಿನ ಎಕ್ಸ್‌ಪರ್ಟ್ ಪಪೂ ಕಾಲೇಜಿನ ಶೇ.99 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ಮೂಲಕ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ ಎಂದು ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅಭಿಮಾನ ವ್ಯಕ್ತಪಡಿಸಿದ್ದಾರೆ.

ನೀಟ್ 2025 ಪರೀಕ್ಷೆಯಲ್ಲಿ ರ‌್ಯಾಂಕ್ ವಿಜೇತ ಮಂಗಳೂರು ಎಕ್ಸ್‌ಪರ್ಟ್ ಪಪೂ ಕಾಲೇಜು ವಿದ್ಯಾರ್ಥಿಗಳಿಗೆ ನಗರದ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ನೀಟ್ 2025ರಲ್ಲಿ 601 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಭಾರತದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.1.43ರಷ್ಟು ಎಕ್ಸ್‌ಪರ್ಟ್‌ನ ವಿದ್ಯಾರ್ಥಿಗಳಾಗಿದ್ದಾರೆ. ಇದೊಂದು ಅಭೂತಪೂರ್ವ ಸಾಧನೆಯಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್ ನಾಯಕ್, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್.ನಾಯಕ್, ಆರ್ಕಿಟೆಕ್ಟ್ ದೀಪಿಕಾ ಎ.ನಾಯಕ್, ವಳಚ್ಚಿಲ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ ವಿಜಯನ್, ಕೊಡಿಯಾಲ್‌ಬೈಲ್ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್, ಶೈಕ್ಷಣಿಕ ವಿಭಾಗದ ಉಪಪ್ರಾಂಶುಪಾಲ ಪ್ರೊ.ಸುಬ್ರಹ್ಮಣ್ಯ ಉಡುಪ, ಕೋಚಿಂಗ್ ಸಂಯೋಜಕರಾದ ಗುರುದತ್ತ್ ಮತ್ತು ಕುರುಣಾಕರ ಬಳ್ಕೂರು ಉಪಸ್ಥಿತರಿದ್ಧರು.

--------------

ರ‌್ಯಾಂಕ್‌ಗಾಗಿ ಮಾತ್ರ ಅಭ್ಯಾಸ ನಡೆಸಿಲ್ಲ. ಉತ್ತಮ ಲಿತಾಂಶದ ಗುರಿಯ ಜತೆಯಲ್ಲಿ ಸಮಗ್ರ ಕಲಿಕೆಯ ಗುರಿ ಮುಖ್ಯ. ಎಕ್ಸ್‌ಪರ್ಟ್ ಸಂಸ್ಥೆಯ ಆಡಳಿತ ವರ್ಗ, ಬೋಧಕ- ಬೋಧಕೇತರ ಸಿಬ್ಬಂದಿಯ ಸಹಕಾರ, ತಂದೆ- ತಾಯಿಯವರ ನಿರಂತರ ಬೆಂಬಲದಿಂದ ಇದು ಸಾಧ್ಯವಾಗಿದೆ. ಈ ಸಂಸ್ಥೆಯಲ್ಲಿ ಶಿಕ್ಷಣ ಮಾತ್ರವಲ್ಲದೆ, ಶಿಸ್ತು, ಜೀವನ ಕೌಶಲ ಕಲಿತಿದ್ದೇನೆ.

ನಿಖಿಲ್ ಸೊನ್ನದ್

(ಅಖಿಲ ಭಾರತ ಮಟ್ಟದ 17 ನೇ ರ‌್ಯಾಂಕ್ ವಿಜೇತ ವಿದ್ಯಾರ್ಥಿ)

--------------

ಜೀವನದಲ್ಲಿ ಕಂಡಿರುವ ಒಂದು ದೊಡ್ಡ ಕನಸು ನನಸು ಮಾಡಿಕೊಂಡಿರುವ ಸಂತೃಪ್ತಿ ಇಂದು ಉಂಟಾಗಿದೆ. ಕ್ಲಾಸ್ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಅಂಕ ಪಡೆದ ಒಂದು ದಿನ ಅಳುತ್ತಾ ಕುಳಿತ್ತಿದ್ದ ನನ್ನನ್ನು ಗಮನಿಸಿ ಸಂಸ್ಥೆಯ ಚೇರ್ಮನ್ ಧೈರ್ಯ ತುಂಬಿದ್ದರು. ಏನೂ ಆಗಿಲ್ಲ. ಧೈರ್ಯ ಕೆಡಬೇಡ. ಕಠಿಣ ಪರಿಶ್ರಮಕ್ಕೆ ಲ ನಿಶ್ಚಿತ. ಒಂದು ದಿನ ಎಲ್ಲರೂ ನಿನ್ನ ಕಡೆಗೆ ತಿರುಗಿ ನೋಡುವಂತಹ ಸಾಧನೆ ನೀನು ಮಾಡುತ್ತೀ ಎಂದು ಸಂತೈಸಿದ್ದರು. ಅವರ ಭರವಸೆಯನ್ನು ಉಳಿಸಿಕೊಂಡಿದ್ದೇನೆ.

ನಿಧಿ ಕೆ.ಜಿ.

84 ನೇ ರ‌್ಯಾಂಕ್ ವಿಜೇತೆ

---------