ಮಂಗಳೂರು: ನಗರದ ಹೊರ ವಲಯದ ಆಡಂಕುದ್ರು ಸರ್ಕಾರಿ ಶಾಲಾ ಹಿಂಭಾಗದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿರುವುದನ್ನು ಅಬಕಾರಿ ಅಧಿಕಾರಿಗಳು ಪತ್ತೆ ಮಾಡಿ 5 ಲೀಟರ್ ಕಳ್ಳಭಟ್ಟಿ ಸಹಿತ ಓರ್ವನನ್ನು ಬಂಧಿಸಿದ್ದಾರೆ.
ಉರ್ಬನ್ ಡಿಸೋಜ ಬಂಧಿತ ಆರೋಪಿ. ಈತ ತನ್ನ ಖಾಲಿ ಜಾಗದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ. ಕಳ್ಳಭಟ್ಟಿ ತಯಾರಿಗೆ ಉಪಯೋಗಿಸುತ್ತಿದ್ದ ಸಲಕರಣೆಗಳು, 40 ಲೀ.ನಷ್ಟು ಬೆಲ್ಲದ ಕೊಳೆ ಪತ್ತೆಯಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಮೊತ್ತ 16 ಸಾವಿರ ರೂ. ಆಗಬಹುದೆಂದು ಅಂದಾಜಿಸಲಾಗಿದೆ.
ಮಂಗಳೂರು ದಕ್ಷಿಣ ವಲಯದ ಅಬಕಾರಿ ಇನ್‌ಸ್ಪೆಕ್ಟರ್ ಕಮಲ ಎಚ್. ಅವರು ಪ್ರಕರಣ ದಾಖಲಿಸಿದ್ದು, ಅಬಕಾರಿ ಉಪನಿರೀಕ್ಷಕರಾದ ಹರೀಶ್ ಪಿ., ಕಾನ್‌ಸ್ಟೇಬಲ್‌ಗಳಾದ ಬಸವರಾಜ ತೋರೆ, ಆನಂದ್, ವಾಹನ ಚಾಲಕ ರಘುರಾಮ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.