ಜಿಲ್ಲೆ

ಕಾರುಣ್ಯ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ - ಫ್ರೆಂಡ್ಸ್ ಕೂಳೂರು ವಿನ್ನರ್ಸ್, ಕೃಷ್ಣಾಪುರ ಸಂಗಂ ಯಂಗ್ ಬಾಯ್ಸ ರನ್ನರ್ಸ್

ಮಂಗಳೂರು: ಬಂಗ್ರಕೂಳೂರು ಗೋಲ್ಡ್ ಫಿಂಚ್ ಮೈದಾನದಲ್ಲಿ ಭಾನುವಾರ ಟೀಮ್ ಎಜು ಕಾರುಣ್ಯ ಆಶ್ರಯದಲ್ಲಿ ನಡೆದ ಕಾರುಣ್ಯ ಟ್ರೋಫಿ ಆಹ್ವಾನಿತ 32 ತಂಡಗಳ ಅಂಡರ್‌ಆರ್ಮ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫ್ರೆಂಡ್ಸ್ ಕೂಳೂರು ತಂಡ ವಿನ್ನರ್ಸ್, ಕೃಷ್ಣಾಪುರ ಯಂಗ್ ಬಾಯ್ಸ ರನ್ನರ್ಸ್ ಆಗಿ ಹೊರ ಹೊಮ್ಮಿದವು.

ಕೀರ್ತಿಶೇಷ ದಿ.ವಿಶ್ವನಾಥ ಆಳ್ವ ಶಾಂತಿನಗರ ಸ್ಮರಣಾರ್ಥ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿದ್ಯಾನಿಧಿಯ ಸಹಾಯಾರ್ಥ ಪಂದ್ಯಾವಳಿ ನಡೆಯಿತು.

ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಪಂದ್ಯಾವಳಿ ಉದ್ಘಾಟಿಸಿದರು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಪುಣ್ಯದ ಕೆಲಸ ಎಂದರು.

ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಯಕ್ಷಗಾನ ಪ್ರಸಂಗಕರ್ತ ಜಿ.ಕೆ.ಶ್ರೀನಿವಾಸ ಸಾಲ್ಯಾನ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಅಬ್ಬೆಟ್ಟು ಉದಯ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕುಮಾರ್ ಅಬ್ಬೆಟ್ಟು, ಪತ್ರಕರ್ತರಾದ ಹರೀಶ್ ಮೋಟುಕಾನ, ಸುರೇಶ್ ಡಿ.ಪಳ್ಳಿ, ಪ್ರಮೋದ್, ರೋಶನಿ ನಿಲಯದ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ಭಟ್, ಸುಧೀರ್ ಆಳ್ವ, ಉಮೇಶ್ ಮಲರಾಯಸಾನ ಅತಿಥಿಗಳಾಗಿದ್ದರು. ಯುವ ಸ್ಪಂದನ ಸಿಇಒ ರಾಜೇಶ್ ಅತ್ಯಾಡಿ, ದಿನೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಅರ್ಜುನ್ ಭಂಡಾರ್‌ಕರ್, ಉದ್ಯಮಿ ರಮೇಶ್ ಕೋಟ್ಯಾನ್, ಸುಧೀರ್ ಆಳ್ವ, ಶ್ರೇಯಸ್ ಆಳ್ವ, ಕಾವೂರು ವಿದ್ಯಾನಗರ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ವಿನಯ ಕುಮಾರ್,ತ್ರಿಶಾ ಆಚಾರ್ಯ ಅತಿಥಿಗಳಾಗಿದ್ದರು.

ಎಜು ಕಾರುಣ್ಯ ಟ್ರೋಫಿಯ ಸಂಚಾಲಕ ಮೋಹನದಾಸ ಮರಕಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಿತ್ ಪಂಜಿಮೊಗರು ಕಾರ್ಯಕ್ರಮ ನಿರೂಪಿಸಿದರು.