ಹರೀಶ್ ಮೋಟುಕಾನ ಮಂಗಳೂರು
ಡಬಲ್ ಮರ್ಡರ್ ಕುಖ್ಯಾತಿಯ ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕರ ಹುದ್ದೆ ಇದೆ. ಆದರೆ ಆ ಹುದ್ದೆಯಲ್ಲಿರುವ ಅಧಿಕಾರಿ ಕರ್ತವ್ಯ ನಿರ್ವಹಿಸುವುದು ಇನ್ನೊಂದು ಕಾರಾಗೃಹದಲ್ಲಿ.
ಕಾಯಂ ಅಧೀಕ್ಷಕರು ಬಂದು ಅಧಿಕಾರ ಸ್ವೀಕರಿಸಿದ ಮರುದಿನವೇ ಅವರನ್ನು ಅನ್ಯಕಾರ್ಯ ನಿಮಿತ್ತ(ಅಧೀಕ್ಷಕರೇ ಹುದ್ದೆ ನಿರ್ವಹಣೆ ಮಾಡುವಂತಾಗಿದೆ.
ಅಧೀಕ್ಷಕರ ಹುದ್ದೆ ಮಂಜೂಒಒಡಿ) ಬೇರೆ ಕೇಂದ್ರ ಕಾರಾಗೃಹಗಳಿಗೆ ಕಳುಹಿಸಲಾಗುತ್ತಿದೆ. ಮೂರು ವರ್ಷಗಳಿಂದ ಇಲ್ಲಿ ಸಹಾಯಕ ರಾದ ಬಳಿಕ ಮೊದಲ ಅಧೀಕ್ಷಕರಾಗಿ ಕೆ.ಸುರೇಶ್ ಎಂಬವರನ್ನು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಒಒಡಿ ನೆಲೆಯಲ್ಲಿ ನಿಯೋಜನೆಗೊಂಡರು. ಬಳಿಕ ಅವರು ಅಲ್ಲಿಂದಲೇ ವರ್ಗಾವಣೆಯಾದರು. ಬಳಿಕ ಎಂ.ಎ.ಮರೀಗೌಡ ಅವರನ್ನು ಮಂಗಳೂರು ಕಾರಾಗೃಹದ ಅಧೀಕ್ಷಕರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಅವರು ಅಧಿಕಾರ ಸ್ವೀಕರಿಸಿದ ಮರುದಿನವೇ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಒಒಡಿ ನೆಲೆಯಲ್ಲಿ ತೆರಳಿದರು. ಜೂ.12ರಂದು ಅವರನ್ನು ಅಲ್ಲಿಂದ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಮಂಗಳೂರಿಗೆ ಯಾರನ್ನೂ ನಿಯೋಜಿಸಿಲ್ಲ.
ಪ್ರಭಾರಿಯೇ ಕಾಯಂ
ಪ್ರೊಬೆಷನರಿ ಸಹಾಯಕ ಆಯುಕ್ತರಾಗಿ ಮಂಗಳೂರು ಜೈಲಿಗೆ ನಿಯೋಜಿತರಾದ ಚಂದನ್ ಪಟೇಲ್ ಪ್ರೊಬೆಷನರಿ ಅವಧಿ ಮುಗಿಸಿ ಪ್ರಸ್ತುತ ಸಹಾಯಕ ಅಧೀಕ್ಷಕರಾಗಿದ್ದಾರೆ. ಅವರೇ ಅಧೀಕ್ಷಕರ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ. ಸರ್ಕಾರ ಕಾಯಂ ಅಧೀಕ್ಷಕರನ್ನಾಗಿ ನೇಮಕ ಮಾಡಿದ ಬಳಿಕ ಯಾವುದೇ ಕಾರಣಕ್ಕೂ ಇನ್ನೊಂದು ಕಾರಾಗೃಹಕ್ಕೆ ಒಒಡಿ ನೆಲೆಯಲ್ಲಿ ಕಳುಹಿಸಬಾರದು. ಇದರಿಂದ ಮಂಗಳೂರು ಕಾರಾಗೃಹಕ್ಕೆ ಪ್ರಯೋಜನವಿಲ್ಲ. ಈ ಬಗ್ಗೆ ಗೃಹ ಇಲಾಖೆ ಗಮನ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಖಡಕ್ ಅಧೀಕ್ಷಕರು ಬೇಕಾಗಿದ್ದಾರೆ! ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಡಬಲ್ ಮರ್ಡರ್ ಬಳಿಕ ಭದ್ರತೆ ಹೆಚ್ಚಿಸಲಾಯಿತು. ಸಿಬ್ಬಂದಿ ಸಂಖ್ಯೆಯೂ ಹೆಚ್ಚಿತು. ಬೃಹತ್ ಆವರಣಗಳ ನಿರ್ಮಾಣ, ಸಿಸಿ ಕ್ಯಾಮರಾ ಅಳವಡಿಕೆ, ಕೈಗಾರಿಕಾ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಯಿತು. ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಆ ಸಮಯದಲ್ಲೇ ಅಧೀಕ್ಷಕರ ಹುದ್ದೆ ಕೂಡ ಮಂಜೂರುಗೊಂಡಿತ್ತು. 250 ಮಂದಿಗೆ ಅವಕಾಶವಿರುವ ಕಾರಾಗೃಹದಲ್ಲಿ ಪ್ರಸ್ತುತ 300ಕ್ಕಿಂತಲೂ ಅಧಿಕ ವಿಚಾರಣಾಧೀನ ಕೈದಿಗಳಿದ್ದಾರೆ. ಆದ್ದರಿಂದ ಖಡಕ್ ಅಧೀಕ್ಷಕರ ಅಗತ್ಯವಿದೆ. ಆಗ ಮಾತ್ರ ಮಂಜೂರುಗೊಂಡ ಹುದ್ದೆಗೆ ಅರ್ಥ ಬರುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಮಂಗಳೂರು ಕಾರಾಗೃಹದ ಅಧೀಕ್ಷಕರ ಹುದ್ದೆಗೆ ವರ್ಗಾವಣೆಗೊಂಡು ಬಂದವರನ್ನು ಒಒಡಿ ನೆಲೆಯಲ್ಲಿ ಇತರ ಕೇಂದ್ರ ಕಾರಾಗೃಹಕ್ಕೆ ನಿಯೋಜಿಸುತ್ತಿರುವ ವಿಚಾರ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಎಲ್ಲ ಕಾರಾಗೃಹಗಳಿಗೂ ಕಾಯಂ ಅಧೀಕ್ಷರನ್ನು ನಿಯೋಜಿಸುವುದು ಸರ್ಕಾರದ ಆದ್ಯತೆ. ಬಸವರಾಜ ಬೊಮ್ಮಾಯಿ ಗೃಹ ಸಚಿವರು, ಕರ್ನಾಟಕ ಸರ್ಕಾರ