ಜಿಲ್ಲೆ

12ರಿಂದ 14ರ ವರೆಗೆ ದೈವಜ್ಞ ಯೂನಿಟಿ ಕಪ್-2025 ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ

ಮಂಗಳೂರು: ಎಸ್.ಎಲ್.ಶೇಟ್, ಎಂ.ರಘುನಾಥ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇವರ ಪ್ರಾಯೋಜಕತ್ವದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಸಂಘಟನೆ ಮತ್ತು ಶ್ರೇಯೋಭಿವೃದ್ದಿಗಾಗಿ ದೈವಜ್ಞ ಯೂನಿಟಿ ಕಪ್-2025 ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ನಗರದ ಉರ್ವ ಕ್ರಿಕೆಟ್ ಮೈದಾನದಲ್ಲಿ ೆ.12ರಿಂದ 14ರ ವರೆಗೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಎಂ.ಪ್ರಶಾಂತ್ ಶೇಟ್ ಹೇಳಿದರು.

ಇದೇ ಮೊದಲ ಬಾರಿಗೆ ದೈವಜ್ಞ ಬ್ರಾಹ್ಮಣ ಸಮಾಜದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ 12 ಜಿಲ್ಲೆಗಳಿಂದ 22 ತಂಡಗಳು ಭಾಗವಹಿಸಲಿದೆ. 330ಕ್ಕೂ ಹೆಚ್ಚಿನ ಆಟಗಾರರು ಈ ಪಂದ್ಯಾಟದಲ್ಲಿ ಆಡಲಿದ್ದಾರೆ. ಇದೊಂದು ಓವರ್ ಆರ್ಮ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವಾಗಿದೆ ಎಂದವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ೆ.12ರಂದು ಕ್ರಿಕೆಟ್ ಪಂದ್ಯಾಟವನ್ನು ಎಸ್.ಎಲ್.ಶೇಟ್, ಎಂ.ರಘುನಾಥ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪದ್ಮ ಆರ್. ಶೇಟ್ ಉದ್ಘಾಟಿಸುವರು. ಈ ಸಂದರ್ಭ ಮಾಜಿ ಕ್ರಿಕೆಟ್ ಆಟಗಾರ ಶಿವಪ್ರಸಾದ್ ಮಂಜುನಾಥ್ ಶೇಟ್ ಭಾಗವಹಿಸಲಿದ್ದಾರೆ. ಈ ಬಳಿಕ ೆ.12ರಿಂದ ರಾತ್ರಿ 11ರ ವರೆಗೆ ಕ್ರಿಕೆಟ್ ಪಂದ್ಯಾಟ ಸಾಗಲಿದೆ. ೆ.13ರಂದು ಬೆಳಗ್ಗೆ 10ರಿಂದ ರಾತ್ರಿ 11ರ ವರೆಗೆ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ೆ.14ರಂದು ಬೆಳಗ್ಗೆ 10ರಿಂದ 4ರ ವರೆಗೆ ಅಂತಿಮ ಸುತ್ತಿನ ಪಂದ್ಯಾಟಗಳು ನಡೆದು, ಸಂಜೆ 5ಕ್ಕೆ ಸಂಘನಿಕೇತನದಲ್ಲಿ ಕಲಾ ಹಂಸ್ ಬೆಂಗಳೂರಿನ ಸೂರಜ್ ಡಿ ವರ್ಣೆಕರ್ ಮತ್ತು ಬಳಗದಿಂದ ಸಂಗೀತ ಮನೋರಂಜನೆ ಕಾರ‌್ಯಕ್ರಮ ನಡೆಯಲಿದೆ. ಈ ಬಳಿಕ ಸಭಾ ಕಾರ‌್ಯಕ್ರಮ ಮತ್ತು ಬಹುಮಾನ ವಿತರಣೆಯಲ್ಲಿ ಉಡುಪಿ ಶ್ರೀಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉಪಸ್ಥಿತರಿರುವವರು ಅಧ್ಯಕ್ಷತೆಯನ್ನು ಕೈಗಾರಿಕಾ ಉದ್ಯಮಿ ದಯಾನಂದ ನೇತಾಳ್ಕರ್ ಬೆಳಗಾವಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ಡಿ.ವೇದವ್ಯಾಸ ಕಾಮತ್ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭ ಉಪಾಧ್ಯಕ್ಷ ಎಂ.ನಿಶಾಂತ್ ಶೇಟ್, ಕಾರ‌್ಯದರ್ಶಿ ಎಂ.ಎಸ್. ಗುರುರಾಜ ಶೇಟ್, ಆಡಳಿತ ಸಮಿತಿಯ ಉಪ ಕಾರ‌್ಯದರ್ಶಿ ಅರ್ಜುನ್ ಡಿ. ಶೇಟ್, ವ್ನಿೇಶ್ ಶೇಟ್ ಹಾಗೂ ಕೋಶಾಧಿಕಾರಿ ರಾಘವೇಂದ್ರ ಶೇಟ್ ಉಪಸ್ಥಿತರಿದ್ದರು.

ಸಾಧಕ ಅಥ್ಲೀಟ್‌ಗಳಿಗೆ ಸನ್ಮಾನ

ಸಮಾರೋಪದಲ್ಲಿ ಸಮಾಜದ ಭೂಷಣ್ ಅನ್ವೇಕರ್( ಶಟಲ್), ಅರ್ಪಿತಾ ಶೇಟ್( ಸ್ಕೇಟಿಂಗ್) ಹಾಗೂ ಪ್ಯಾರ ಒಲಿಂಪಿಕ್ ಆಟಗಾರ ರಾಘವೇಂದ್ರ ಶೇಟ್(ಸ್ವಿಮ್ಮಿಂಗ್) ಅವರನ್ನು ಸನ್ಮಾನಿಸಲಾಗುತ್ತದೆ. ಟ್ರಸ್ಟ್‌ನ ವತಿಯಿಂದ ಹಲವು ಮಂದಿಗೆ ಧನಸಹಾಯ ವಿತರಣೆ ಕೂಡ ನಡೆಯಲಿದೆ. ವಿಶೇಷವಾಗಿ ವಿನ್ನರ್‌ಗಳಿಗೆ 99 ಸಾವಿರ ರೂ. ನಗದು ಮತ್ತು ರೋಲಿಂಗ್ ಟ್ರೋಫಿ, ರನ್ನರ್ಸ್‌ಗಳಿಗೆ 49 ಸಾವಿರ ರೂ. ಮತ್ತು ರೋಲಿಂಗ್ ಟ್ರೋಫಿ, ಇದರ ಜತೆಯಲ್ಲಿ ಮ್ಯಾನ್ ಆ್ ದೀ ಸಿರೀಸ್, ಮ್ಯಾನ್ ಆ್ಯಪ್ ದೀ ಮ್ಯಾಚ್, ಬೆಸ್ಟ್ ಬೌಲರ್ ಮೊದಲಾದ ಟ್ರೋಫಿ, ನಗದು ಬಹುಮಾನ ರೂಪದಲ್ಲಿ ಸಿಗಲಿದೆ ಎಂದು ಆಡಳಿತ ಸಮಿತಿಯ ಉಪಾಧ್ಯಕ್ಷ ಎಂ.ನಿಶಾಂತ್ ಶೇಟ್ ಹೇಳಿದರು.

ಮುಂದೆ ಟ್ರಸ್ಟ್‌ನಿಂದ ಸಾಕಷ್ಟು ಕಾರ‌್ಯಕ್ರಮ

ಎಸ್.ಎಲ್.ಶೇಟ್, ಎಂ.ರಘುನಾಥ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಮೊದಲ ಬಾರಿಗೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಬಳಿಕ ಮುಂದಿನ ಪ್ರತಿ ಮೂರು ತಿಂಗಳಿಗೊಮ್ಮೆ ಕಲೆ, ವೈದ್ಯಕೀಯ ನೆರವು, ಶಿಕ್ಷಣ, ಪ್ರದರ್ಶನದಂತಹ ಚಟುವಟಿಕೆಗಳಲ್ಲಿ ಕಾರ‌್ಯಕ್ರಮಗಳನ್ನು ಮಾಡಲು ನಿರ್ಧಾರ ಮಾಡಲಾಗಿದೆ. 1971ರಿಂದ 1984ರ ವರೆಗೆ ತಂದೆಯವರಾದ ಎಂ.ರಘುನಾಥ್ ಶೇಟ್ ಅವರು ಕಬಡ್ಡಿ ಪಂದ್ಯಾಟಗಳನ್ನು ಆಯೋಜಿಸುವ ಕೆಲಸ ಮಾಡಿದ್ದರು. ಈ ಬಳಿಕ ಅದು ನಿಂತು ಹೋಯಿತು. ಇನ್ನು ಮುಂದೆ ಇಂತಹ ಕ್ರೀಡಾ ಚಟುವಟಿಕೆಗಳನ್ನು ಮತ್ತೆ ಮುಂದುವರಿಸಲು ನಿರ್ಧಾರ ಮಾಡಿದ್ದೇವೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಎಂ.ಪ್ರಶಾಂತ್ ಶೇಟ್ ಹೇಳಿದರು.