ಮಂಗಳೂರು : ಪೊಲೀಸರು ಗುರುವಾರ ವಿವಿಧೆಡೆ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸೇವನೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಬೆಳಗ್ಗೆ 11ಕ್ಕೆ ಮಂಗಳೂರು ತಾಲೂಕು ತಿರುವೈಲು ಗ್ರಾಮದ ಕೆತ್ತಿಕಲ್ಲಿನಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ತಿರುವೈಲಿನ ಚರಣ್‌ರಾಜ್(28)ನನ್ನು, ಮಧ್ಯಾಹ್ನ 2ಕ್ಕೆ ಉಳಾಯಿಬೆಟ್ಟು ಜಂಕ್ಷನ್‌ನಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ ಬಂಟ್ವಾಳ ಅಮ್ಟಾಡಿಯ ಕಾರ್ತಿಕ್ ಡಿ(27)ನನ್ನು ಬಂಧಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿಸಲಾದ ಆ್ಯಂಟಿ ಡ್ರಗ್ ಟೀಮ್‌ನ ಪೊಲೀಸರು ನ.30ರಂದು ಸಂಜೆ ಉತ್ತರ ದಕ್ಕೆಯ ಬಳಿ ಗಾಂಜಾ ಸೇವನೆ ಮಾಡಿದ್ದ ಕಸ್ಬಾ ಬೆಂಗ್ರೆಯ ಮೊಹಮ್ಮದ್ ನೌಷಾದ್(19)ನನ್ನು ಮತ್ತು ಪಂಪ್‌ವೆಲ್ ಬಳಿ ಗಾಂಜಾ ಸೇವನೆ ಮಾಡಿದ್ದ ಕೃಷ್ಣಪಾರದ ಅಬ್ದುಲ್ ಖಾದರ್(25)ನನ್ನು ಬಂಧಿಸಿದ್ದಾರೆ.