Gavel on desk. Isolated with good copy space. Dramatic lighting. 
ಜಿಲ್ಲೆ

ಮಗು ಅಪರಹರಣ ಪ್ರಕರಣ ಸಾಬೀತು ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ


ಮಂಗಳೂರು: ನಗರದ ರೈಲ್ವೇ ನಿಲ್ದಾಣ ಬಳಿ 7 ತಿಂಗಳ ಮಗುವಿನ ಅಪಹರಣಗೈದು ಕಳ್ಳಸಾಗಾಟ ನಡೆಸಿದ ಪ್ರಕರಣ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ರುಬಿಯಾ ಯಾನೆ ಾತಿಮಾ (44) ಪ್ರಕರಣದ ಅಪರಾಧಿ.


ಪ್ರಕರಣದ ಹಿನ್ನೆಲೆ: 2016ರ ಡಿಸೆಂಬರ್ ತಿಂಗಳಲ್ಲಿ ಆರೋಪಿ ರುಬಿಯಾ ಮಂಗಳೂರಿಗೆ ಭಿಕ್ಷಾಟನೆಗೆಂದು ಬಂದು ಕಂಕನಾಡಿ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಾತಿಮಾ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಳು. ಈ ಸಂದರ್ಭ ದೂರುದಾರರ ಜತೆಗೂ ಾತಿಮಾ ಅನ್ಯೋನ್ಯವಾಗಿದ್ದಳು. 2017ರ ಜ.12ರಂದು ರೈಲ್ವೆ ಜಂಕ್ಷನ್ ಪಾರ್ಕಿಂಗ್ ಸ್ಥಳದ ಬಳಿ ದೂರುದಾರ ಮಹಿಳೆಯು ತನ್ನ 7 ತಿಂಗಳ ಹಸುಗೂಸು ಮುಬಾರಕನನ್ನು ಮಲಗಿಸಿ ಭಿಕ್ಷಾಟನೆಗೆ ಹೋಗಿದ್ದರು. ಈ ಸಂದರ್ಭ ಆರೋಪಿತೆ ಾತಿಮಾ ಮಗುವನ್ನು ಅಪಹರಿಸಿ ಬಿಕ್ಷಾಟನೆಗಾಗಿ ಕಳ್ಳಸಾಗಾಟ ಮಾಡಿ, ನಂತರ ಮಗುವಿನ ತಾಯಿ ಜತೆ ಹುಡುಕುವ ನಾಟಕವಾಡಿದ್ದಳು. ಬಳಿಕ ಆರೋಪಿ ಮಹಿಳೆ ಮಗುವನ್ನು ಊರೂರು ತಿರುಗಾಡಿಸಿ ಭಿಕ್ಷಾಟನೆ ಮಾಡುತ್ತಿದ್ದಳು. 2020 ಜ.22ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಮಂಡಿ ಮೊಹಲ್ಲಾ ಗ್ರಾಮದ ಅಶೋಕ ರಸ್ತೆಯಲ್ಲಿರುವ ಮಸ್ಜೀದ್ ಇ ಅಜಮ್ ಮಸೀದಿ ಎದುರಿನಲ್ಲಿ ಮಗುವಿನ ಜತೆ ಭಿಕ್ಷಾಟನೆ ಮಾಡುತ್ತಿದ್ದಳು. ಇದನ್ನು ದೂರುದಾರ ಮಹಿಳೆ ಗುರುತಿಸಿ ಪೊಲೀಸರಿಗೆ ತಿಳಿಸಿದ್ದರು. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಮಂಗಳೂರರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದಲ್ಲಿ ಅಭಿಯೋಜನೆಯ ಸಾಕ್ಷ್ಯಾಧಾರವನ್ನು ಪರಿಗಣಿಸಿದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಆರೋಪಿ ವಿರುದ್ಧ 2024ರ ೆ.1ರಂದು ಶಿಕ್ಷೆ ತೀರ್ಪನ್ನು ಪ್ರಕಟಿಸಿದ್ದಾರೆ. ಅಪರಾಧಿಗೆ ಭಾರತೀಯ ದಂಡ ಸಂಹಿತೆ-363 ಶಿಕ್ಷಾರ್ಹ ಕಲಂಗೆ 4ವರ್ಷ ಶಿಕ್ಷೆ 10 ಸಾವಿರ ರೂ. ದಂಡ ಪಾವತಿ, ದಂಡ ಪಾವತಿಸಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.


ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್ ರಾಮಕೃಷ್ಣ ಕೆ.ಕೆ. ಹಾಗೂ ಉಪನಿರೀಕ್ಷಕ ಪ್ರದೀಪ್ ಟಿ.ಆರ್. ಸಮಗ್ರ ತನಿಖೆ ನಡೆಸಿ ಒಟ್ಟು 20 ಸಾಕ್ಷಿದಾರರನ್ನು ತನಿಖೆ ನಡೆಸಿ ಆರೋಪಿ ವಿರುದ್ಧ ಐಪಿಸಿ 363(2) ಮತ್ತು 370ರಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ ಪರ ಜ್ಯೋತಿ ಪ್ರಮೋದ ನಾಯಕ ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.