ಮಂಗಳೂರು: ನಗರದ ಲೇಡಿಹಿಲ್‌ನಲ್ಲಿ ಶನಿವಾರ ರಾತ್ರಿ ಸ್ವಿಫ್ಟ್ ಡಿಸೈರ್ ಸಿಎನ್‌ಜಿ ಕಾರು ಏಕಾಏಕಿ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕದಳ ಆಗಮಿಸಿ ಹೆಚ್ಚಿನ ಬೆಂಕಿಯನ್ನು ನಂದಿಸಿದ್ದಾರೆ.
ಕಾರು ಉರ್ವಸ್ಟೋರ್‌ನಿಂದ ಮಣ್ಣಗುಡ್ಡ ಕಡೆಗೆ ಹೋಗುತ್ತಿದ್ದಾಗ ಲೇಡಿಹಿಲ್ ಶಾಲೆಯ ಬಳಿ ತಲುಪುತ್ತಿದ್ದಂತೆ ಇಂಜಿನ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಬೆಂಕಿ ಕಂಡು ಬಂದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭ ರಸೆಯಲ್ಲಿ ಸುಮಾರು ಅರ್ಧ ತಾಸು ವಾಹನ ದಟ್ಟಣೆ ಉಂಟಾಯಿತು.
ಮೂರು ದಿನಗಳ ಹಿಂದೆ ಮೇರಿಹಿಲ್ ಹೆಲಿಪ್ಯಾಡ್‌ಗೆ ಹೋಗುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೋಕ್ಸ್‌ವ್ಯಾಗನ್ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕಗಳ ಆಗಮಿಸಿ ಶಮನಗೊಳಿಸಿತ್ತು. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಎನ್‌ಐಟಿಕೆ, ಅಡ್ಯಾರು, ಕದ್ರಿ, ವೆಲೆನ್ಸಿಯಾ, ಮೇರಿಹಿಲ್ ಮೊದಲಾದ ಕಡೆ ಚಲಿಸುತ್ತಿದ್ದ ಕಾರುಗಳು ಬೆಂಕಿಗಾಹುತಿಯಾಗುತ್ತಿರುವುದು ವಾಹನ ಸವಾರರಲ್ಲಿ ಆತಂಕ ಉಂಡು ಮಾಡಿದೆ.