ಜಿಲ್ಲೆ

ಅಫ್ಘನ್‌ ಉದ್ಯೋಗಿ ಮಂಗಳೂರು ಕೊಲ್ಯ ನಿವಾಸಿ ಪ್ರಸಾದ್‌ ಆನಂದ್‌ ಮರಳಿ ಮನೆಗೆ

reportermng

ಮಂಗಳೂರು: ಅಫ್ಘಾನಿಸ್ತಾನದ ಕಾಬೂಲ್‌ ಮಿಲಿಟರಿ ಬೇಸ್‌ನಲ್ಲಿ ಅಕೌಂಟೆಂಟ್‌ ಆಗಿದ್ದ ಮಂಗಳೂರು ಹೊರವಲಯ ಕೊಲ್ಯ ನಿವಾಸಿ ಪ್ರಸಾದ್‌ ಆನಂದ್‌ (39)ಸೋಮವಾರ ಬೆಳಗ್ಗೆ ಮನೆಗೆ ಆಗಮಿಸಿದ್ದಾರೆ. ಮೂರು ದಿನಗಳ ಹಿಂದೆ ಕಾಬೂಲ್‌ನಿಂದ ಅಮೆರಿಕಾ ನ್ಯಾಟೊ ಪಡೆ ಕತಾರ್‌ ವಿಮಾನ ನಿಲ್ದಾಣಕ್ಕೆ ಏರ್‌ಲಿಫ್ಟ್‌ ಮಾಡಿದ್ದು, ಅವರು ಕತಾರ್‌ನಲ್ಲಿ ಉಳಿದುಕೊಂಡಿದ್ದರು. ಭಾನುವಾರ ರಾತ್ರಿ ನವದೆಹಲಿ ತಲುಪಿದ್ದ ಅವರು, ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. 2013ರಲ್ಲಿ ಅಕೌಂಟೆಂಟ್‌ ಆಗಿ ಕಾಬೂಲ್‌ನ ನ್ಯಾಟೊ ಮಿಲಿಟರಿ ಬೇಸ್‌ನಲ್ಲಿ ಉದ್ಯೋಗಕ್ಕೆ ಸೇರಿದ್ದರು. ಕೊಲ್ಯ ಕನ್ನೀರುತೋಟ ನಿವಾಸಿ ದಿ. ಆನಂದ ಅಮೀನ್‌ ಮತ್ತು ಸರೋಜಿನಿ ದಂಪತಿ ಆರು ಮಕ್ಕಳಲ್ಲಿ ಪ್ರಸಾದ್‌ ಐದನೇಯವರು. ವಿವಾಹಿತರಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ.
ಮಿಲಿಟರಿ ಬೇಸ್‌ನಲ್ಲಿದ್ದ ಕಾರಣ ಹೊರಗಿನ ತಾಲಿಬಾನಿಗಳ ಅಟ್ಟಹಾಸ ಅಷ್ಟಾಗಿ ಗಮನಕ್ಕೆ ಬಂದಿಲ್ಲ. ಕಾಬೂಲಲ್ಲಿ ವಿಮಾನಗಳನ್ನು ತಡೆಹಿಡಿದ ಪಡಿಣಾಮ ಸ್ವಲ್ಪ ಸಂಕಷ್ಟ ಅನುಭವಿಸಬೇಕಾಯಿತು ಎಂದವರು ತಿಳಿಸಿದ್ದಾರೆ.